ADVERTISEMENT

ಮಣಿಪಾಲ | ಕೆಎಂಸಿಗೆ ಪ್ರಯೋಗಾಲಯ ಮಂಜೂರು: ಮಂಗಳವಾರದಿಂದ ಆರಂಭ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 17:06 IST
Last Updated 16 ಮೇ 2020, 17:06 IST

ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಐಸಿಎಂಆರ್ ಅನುಮತಿ ನೀಡಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈಚೆಗೆ ಐಸಿಎಂಆರ್‌ನಿಂದ ಲ್ಯಾಬ್‌ ಆರಂಭಕ್ಕೆ ಅನುಮತಿ ಬಂದಿದ್ದು, ಕೊರೊನಾ ಸೋಂಕು ಪರೀಕ್ಷೆಗೆ ಬೇಕಾದ ಉಪಕರಣಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಮಂಗಳವಾರದಿಂದ ಕಾರ್ಯಾರಂಭವಾಗುವ ಸಾಧ್ಯತೆಗಳಿವೆ.

ಈ ಹಿಂದೆ, ಕೆಎಂಸಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಒಪ್ಪಿಗೆ ನೀಡಿದ್ದಐಸಿಎಂಆರ್‌, ಕಾರಣಾಂತರಗಳಿಂದ ಅನುಮತಿ ವಾಪಸ್‌ ಪಡೆದಿತ್ತು. ಬಳಿಕ, ಜಿಲ್ಲೆಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಮತ್ತೆ ಮಂಜೂರು ಮಾಡಿದೆ.

ADVERTISEMENT

ಪ್ರಯೋಗಾಲಯ ಸ್ಥಾಪನೆಯಿಂದ ಜಿಲ್ಲೆಯ ಕೊರೊನಾ ಸೋಂಕಿತರ ವೈದ್ಯಕೀಯ ಪರೀಕ್ಷಾ ವರದಿ ಶೀಘ್ರವಾಗಿ ಬರಲು ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.