ADVERTISEMENT

ಉಡುಪಿ | ಅವೈಜ್ಞಾನಿಕ ಬೆಳಕು: ಮೀನುಗಾರಿಕೆಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:05 IST
Last Updated 16 ನವೆಂಬರ್ 2025, 6:05 IST
<div class="paragraphs"><p>ಮೀನುಗಾರಿಕೆ</p></div>

ಮೀನುಗಾರಿಕೆ

   

ಉಡುಪಿ: ರಾಜ್ಯ ಹೈಕೋರ್ಟ್‌ ಮಧ್ಯಂತರ ಆದೇಶ ಹಾಗೂ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಆದೇಶದ ಅನ್ವಯ ಅವೈಜ್ಞಾನಿಕ ಬೆಳಕು ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಜಿಲ್ಲೆಯ ಮೀನುಗಾರರು ಬೆಳಕು ಮೀನುಗಾರಿಕೆಗಾಗಿ ದೋಣಿಗಳಲ್ಲಿ ಜನರೇಟರ್‌ಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ ಹಾಗೂ ಬೆಳಕು ಮೀನುಗಾರಿಕೆ ನಡೆಸುವಂತಿಲ್ಲ.

ಆದೇಶವನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆ ನಡೆಸುವುದು ಕಂಡುಬಂದಲ್ಲಿ ಅಂತಹ ಮೀನುಗಾರಿಕಾ ದೋಣಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಜೊತೆಗೆ ದೋಣಿಯ ಡೀಸಿಲ್ ಸರಬರಾಜನ್ನು ತಡೆಹಿಡಿಯಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.