ADVERTISEMENT

ಕೆಸರುಮಯ ರಸ್ತೆ: ಸ್ಥಳೀಯರಿಂದಲೇ ತಾತ್ಕಾಲಿಕ ದುರಸ್ತಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 15:20 IST
Last Updated 10 ಜುಲೈ 2022, 15:20 IST
ಬೈಂದೂರು ತಾಲ್ಲೂಕಿನ ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ರಹಿತ್ಲು ಸಂಪರ್ಕ ರಸ್ತೆಯನ್ನು ಸ್ಥಳೀಯರು ಸ್ವಂತ ಖರ್ಚಿನಲ್ಲಿ ಶ್ರಮದಾನದ ಮೂಲಕ ನಿರ್ಮಿಸಿದರು.
ಬೈಂದೂರು ತಾಲ್ಲೂಕಿನ ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ರಹಿತ್ಲು ಸಂಪರ್ಕ ರಸ್ತೆಯನ್ನು ಸ್ಥಳೀಯರು ಸ್ವಂತ ಖರ್ಚಿನಲ್ಲಿ ಶ್ರಮದಾನದ ಮೂಲಕ ನಿರ್ಮಿಸಿದರು.   

ಬೈಂದೂರು: ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ರಹಿತ್ಲು ಸಂಪರ್ಕ ರಸ್ತೆ ದುರಸ್ತಿ ಕಾಣದೆ ಹಲವು
ವರ್ಷಗಳಾಗಿದ್ದು ವ್ಯವಸ್ಥೆ ವಿರುದ್ಧ ರೋಸಿಹೋದ ಸ್ಥಳೀಯರು ಸ್ವಂತ ಖರ್ಚಿನಲ್ಲಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿಬಾರಿ ಚುನಾವಣೆ ಬಂದಾಗ ಗ್ರಾಮಕ್ಕೆ ತಪ್ಪದೆ ಭೇಟಿನೀಡುವ ರಾಜಕಾರಣಿಗಳು ರಸ್ತೆ ಕಾಂಕ್ರೀಟಿಕರಣದ ಭರವಸೆ ಎಂಬ ತುಪ್ಪ ಸವರಿ ಹೋಗುತ್ತಾರೆ. ಬಳಿಕ ಕೊಟ್ಟ ಆಶ್ವಾಸನೆಗಳನ್ನು ಮರೆತ ಪರಿಣಾಮ ಪ್ರತಿ ಮಳೆಗಾಲದಲ್ಲಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಪ್ರತಿದಿನ ನೂರಾರು ಸಾರ್ವಜನಿಕರು ಶಾಲಾ ಮಕ್ಕಳು ಭಟ್ರಹಿತ್ಲು ರಸ್ತೆಯಲ್ಲಿ ಓಡಾಡುತ್ತಿದ್ದು, ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ದುರಸ್ತಿ ಮಾಡಿಸುವಂತೆ ದುಂಬಾಲು ಬಿದ್ದರೂ ಪ್ರಯೋಜನವಾಗಿಲ್ಲ. ಕೊನೆಗೆ ಸ್ಥಳೀಯರು ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದು ಯುವಕರು ಶ್ರಮದಾನ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.