ADVERTISEMENT

ಲಾರಿ ಒಂದು: ನಂಬರ್ ಪ್ಲೇಟ್‌ ಎರಡು !

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:18 IST
Last Updated 25 ನವೆಂಬರ್ 2021, 16:18 IST

ಉಡುಪಿ: ಎರಡು ನಂಬರ್‌ ಪ್ಲೇಟ್‌ಗಳನ್ನು ಹಾಕಿಕೊಂಡು ಸಂಚರಿಸುತ್ತಿದ್ದ ಮರಳು ಸಾಗಿಸುವ ಲಾರಿಯನ್ನು ಟೆಂಪೊ ಯೂನಿಯನ್ ಸದಸ್ಯರೇ ಪತ್ತೆ ಹಚ್ಚಿರುವ ಘಟನೆ ಗುರುವಾರ ನಡೆದಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಜಿಪಿಎಸ್‌ ಇಲ್ಲದೆ ಲಾರಿಗಳಲ್ಲಿ ಮರಳು ಸಾಗಿಸುತ್ತಿವೆ. ಅಕ್ರಮ ಮರಳುಗಾರಿಕೆ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿಲ್ಲ. ಹಾಗಾಗಿ, ಟೆಂಪೊ ಯೂನಿಯನ್ ಸದಸ್ಯರೇ ಕಾರ್ಯಾಚರಣೆಗಿಳಿಯಬೇಕಾಯಿತು ಎಂದು ಯೂನಿಯನ್ ಮುಖಂಡರು ತಿಳಿಸಿದರು.‌

ಪ್ರತಿನಿತ್ಯ ಶೇ 90ರಷ್ಟು ವಾಹನಗಳು ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿವೆ. ಯೂನಿಯನ್‌ ಲಾರಿಗಳಿಗೆ ಜಿಪಿಎಸ್‌ ಹಾಕಲಾಗಿದೆ, ಆ್ಯಪ್ ಅಳವಡಿಸಿಕೊಳ್ಳಲಾಗಿದೆ. ಹೀಗಿದ್ದರೂ ಮರಳು ಸಾಗಾಟಕ್ಕೆ ಟ್ರಿಪ್ ಸಿಗುತ್ತಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗಣಿ ಇಲಾಖೆ ಅಕ್ರಮಗಳಿಗೆ ಕಡಿವಾಣ ಹಾಕದೆ ಕೈಕಟ್ಟಿ ಕುಳಿತಿವೆ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.