ADVERTISEMENT

ಬಂಟಕಲ್: ಅನ್ಮಯ ಟೆಕ್ನಾಲಜೀಸ್‌ ಸಂಸ್ಥೆ ಒಪ್ಪಂದಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 5:07 IST
Last Updated 17 ಅಕ್ಟೋಬರ್ 2025, 5:07 IST
ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು ಉಡುಪಿಯ ಅನ್ಮಯ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು 
ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು ಉಡುಪಿಯ ಅನ್ಮಯ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು    

ಶಿರ್ವ: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು ಉಡುಪಿಯ ಅನ್ಮಯ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

ಅನ್ಮಯಟೆಕ್ನಾಲಜೀಸ್ ಸಂಸ್ಥೆಯ ಸ್ಥಾಪಕ ಎನ್.ಜೆ.ಹರಿಪ್ರಸಾದ್ ಮಾತನಾಡಿ, ‘ಇಂತಹ ಒಪ್ಪಂದದಿಂದಾಗಿ ವಿದ್ಯಾರ್ಥಿಗಳು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ’ ಎಂದರು.

ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಡಾ.ರಾಧಾಕೃಷ್ಣ ಎಸ್ಐತಾಳ್ ಮಾತನಾಡಿ, ‘ಈ ಒಪ್ಪಂದದಿಂದಾಗಿ ವಿಎಲ್‌ಎಸ್‌ಐ ವಿನ್ಯಾಸ, ಸೆಮಿ ಕಂಡಕ್ಟರ್ ತಂತ್ರಜ್ಞಾನ ಆಧಾರಿತ ಸಂಶೋಧನೆ, ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಯೋಗ, ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ, ಯೋಜನೆ ಆಧಾರಿತ ಕಲಿಕೆ ಹಾಗೂ ನೈಜ ಅನುಭವ ಪಡೆಯಲು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅವಕಾಶ ದೊರೆಯಲಿದೆ’ ಎಂದು ತಿಳಿಸಿದರು.

ADVERTISEMENT