ADVERTISEMENT

ಮಲಬಾರ್ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 14:37 IST
Last Updated 2 ಜನವರಿ 2023, 14:37 IST
ಮಲಬಾರ್ ಗೋಲ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದೆ. ಜ.8 ರವರೆಗೆ ಮೇಳ ನಡೆಯಲಿದೆ.
ಮಲಬಾರ್ ಗೋಲ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದೆ. ಜ.8 ರವರೆಗೆ ಮೇಳ ನಡೆಯಲಿದೆ.   

ಉಡುಪಿ: ಮಲಬಾರ್ ಗೋಲ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದೆ. ಜ.8 ರವರೆಗೆ ಮೇಳ ನಡೆಯಲಿದೆ.

ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಆಭರಣಗಳ ಟೆಂಪಲ್ ಸಂಗ್ರಹವನ್ನು ಇಲಾ ಕಿರಣ್ ಶೆಟ್ಟಿ, ಮೈನ್ ಡೈಮಂಡ್ಸ್ ಅನ್ನು ವೈಷ್ಣವಿ ಕೊಡವೂರು, ಜೆಮ್ಸ್ ಸ್ಟೋನ್ ಸಂಗ್ರಹವನ್ನು ನೊಲಿಟ ಸಲ್ಡಾನ ಅನಾವರಣಗೊಳಿಸಿದರು.

ಇಲಾ ಕಿರಣ್ ಶೆಟ್ಟಿ ಮಾತನಾಡಿ, ಚಿನ್ನಾಭರಣ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು.

ADVERTISEMENT

ಸ್ವಾತಿ ಕುಲಾಲ್, ಪವಿತ್ರ ಶೆಣೈ ರಾಂಪ್ ವಾಕ್ ಗಮನ ಸೆಳೆಯಿತು. ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ, ಮುಸ್ತಫಾ ಇದ್ದರು.

ವಿದ್ಯಾ ಸರಸ್ವತಿ ಸ್ವಾಗತಿಸಿದರು. ಯಶೋದಾ ಕೇಶವ್ ವಂದಿಸಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು.

ಮೈನ್‍ನಲ್ಲಿ ವಜ್ರಾಭರಣಗಳ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭರಣಗಳಿವೆ. ಡಿವೈನ್‍ನಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ. `ಪ್ರಿಶಾ' ದಲ್ಲಿ ರುಬಿ, ಎಮರಾಲ್ದ್ ಹರಳುಗಳ ಚಿನ್ನಾಭರಣ ಸಂಗ್ರಹವಿದೆ. ಎಥ್‌ನಿಕ್ಸ್‌ನಲ್ಲಿ ಕರಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಇರಲಿದೆ. ‘ಎರ’ ಅನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಿದ್ದು, ವಿಶೇಷ ಕೊಡುಗೆಯಾಗಿ ಚಿನ್ನದ ಮೇಲೆ ಫೇರ್ ಪ್ರೈಸ್, ವಜ್ರದ ಮೇಲೆ ಶೇ 25 ರವರೆಗೆ ಕಡಿತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.