ADVERTISEMENT

ಮಂದಾರ್ತಿ ಮಳೆಗಾಲದ ಯಕ್ಷಗಾನ ಆಟಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 2:45 IST
Last Updated 12 ನವೆಂಬರ್ 2022, 2:45 IST
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ದಶಾವತಾರ ಯಕ್ಷಗಾನದ ಮೇಳದ ಮಳೆಗಾಲದ ಯಕ್ಷಗಾನ ಗುರುವಾರ ಸಂಪನ್ನಗೊಂಡಿತು
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ದಶಾವತಾರ ಯಕ್ಷಗಾನದ ಮೇಳದ ಮಳೆಗಾಲದ ಯಕ್ಷಗಾನ ಗುರುವಾರ ಸಂಪನ್ನಗೊಂಡಿತು   

ಮಂದಾರ್ತಿ(ಬ್ರಹ್ಮಾವರ): ಮಂದಾರ್ತಿ ಪರಿಸರದ ಮತ್ತು ಪರವೂರಿನ ಯಕ್ಷಭಿಮಾನಿಗಳಿಗೆ ಮಳೆಗಾಲದಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ಯಕ್ಷ ರಸದೌತಣ ನೀಡಿದ ಮಂದಾರ್ತಿ ದುರ್ಗಾಪರಮೇಶ್ವರಿ ದೇವಳದ ದಶಾವತಾರ ಯಕ್ಷಗಾನ ಮೇಳದ ಮಳೆಗಾಲದ ಆಟ ಗುರುವಾರ ಕೊನೆಯ ಸೇವೆ ಆಟದೊಂದಿಗೆ ಮುಕ್ತಾಯಗೊಂಡಿತು.

ಮಂದಾರ್ತಿ ದೇವಳದ ದುರ್ಗಾಪರಮೇಶ್ವರಿ ಕಲ್ಯಾಣ ಮಂದಿರದಲ್ಲಿ ಸತತ ಆರನೇ ವರ್ಷ ಮಳೆಗಾಲದಲ್ಲಿ ಆಯೋಜಿಸಿದ್ದ ಸೇವೆ ಆಟವು ಜೂನ್ 23ರಿಂದ ಆರಂಭಗೊಂಡು ಯಶಸ್ವಿಯಾಗಿ ನಡೆಯಿತು. ಕರಾವಳಿಯ ಮತ್ತು ಮಲೆನಾಡಿನ ಭಕ್ತರ ಸೇವಾರ್ಥವಾಗಿ ಎರಡು ಮೇಳಗಳೊಂದಿಗೆ ಕಲಾವಿದರ ಸಹಕಾರ, ಸೇವಾರ್ಥಿಗಳ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹದಿಂದ ನಿರಂತರವಾಗಿ ನಡೆದಿದೆ.

ದುರ್ಗಾಪರಮೇಶ್ವರಿ ದೇವಸ್ಥಾನದ ದಶಾವತಾರ ಯಕ್ಷಗಾನದ ಐದೂ ಮೇಳಗಳ ಈ ವರ್ಷದ ತಿರುಗಾಟವು ಇದೇ 17ರಿಂದ ಪ್ರಥಮ ಸೇವೆಯಾಟದೊಂದಿಗೆ ಪ್ರಾರಂಭಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.