ಕಾರ್ಕಳ: ತಾಲ್ಲೂಕಿನ ನಿಟ್ಟೆಯ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಲೋಕಮಾನ್ಯ ಓಟದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ.
ನಿಟ್ಟೆಯ ಡಾ.ಎನ್.ಎಸ್.ಎ.ಎಂ ಕನ್ನಡ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಕ್ಷಿತಾ ಗಣಪತಿ ನಾಯ್ಕ್ 17 ವರ್ಷದೊಳಗಿನ ಬಾಲಕಿಯರ 3 ಕಿ.ಮೀ ಓಟದಲ್ಲಿ ಚಿನ್ನದ ಪದಕ, ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಆಚಾರ್ಯ 5 ಕಿ.ಮೀ ಮುಕ್ತ ವಿಭಾಗದಲ್ಲಿ ಬೆಳ್ಳಿ ಪದಕ, ಡಾ.ಎನ್.ಎಸ್.ಎ.ಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರಕ್ಷಿತ್ ಆರ್.ಬಂಗೇರ 17 ವರ್ಷದೊಳಗಿನ ಬಾಲಕರ 5 ಕಿ.ಮೀ ಓಟದಲ್ಲಿ ಕಂಚಿನ ಪದಕ, ಕನ್ನಡ ಮಾಧ್ಯಮ ಪ್ರೌಢಶಾಲೆಯ ದೀಪಿಕಾ 14 ವರ್ಷದೊಳಗಿನ ಬಾಲಕಿಯರ 3 ಕಿ.ಮೀ ಓಟದಲ್ಲಿ 4ನೇ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.