ಹೆಬ್ರಿ: ‘ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆ ಬಳಿಕ ಸಮಾನ ಮನಸ್ಕ ಯುವಕರು ಸ್ಥಾಪಿಸಿದ ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಮಾದರಿಯಾಗುವ ಕಾರ್ಯ ಮಾಡುತ್ತಿದೆ. ಕ್ಲಬ್‌ನ ಸೇವೆ ನಿರಂತರವಾಗಿರಲಿ, ನಮ್ಮ ಸಹಕಾರ ಸದಾ ಇರುತ್ತದೆ ಎಂದು ಎಂ.ಡಿ.ಅಧಿಕಾರಿ ಪುತ್ಥಳಿ ಸ್ಥಾಪನೆಯ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಪಡುಕುಡೂರು ಎಂ.ಡಿ.ಅಧಿಕಾರಿ ಯೂತ್ ಕ್ಲಬ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಗೌರವಾಧ್ಯಕ್ಷ ಪಡುಪರ್ಕಳ ಹರೀಶ ಶೆಟ್ಟಿ ಮಾತನಾಡಿ, ಪಡುಕುಡೂರಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಮ್ಮೂರಿನಿಂದ ಯುಪಿಎಸ್‌ಸಿ ಅಧಿಕಾರಿಗಳು ಮೂಡಿಬರಬೇಕು. ಪ್ರತಿಭಾವಂತರು ಶ್ರಮಪಟ್ಟು ಆ ಸಾಧನೆ ಮಾಡಬೇಕು. ಅದಕ್ಕಾಗಿ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಸಂದೀಪ ಶೆಟ್ಟಿ ಮಾತನಾಡಿ, ಕ್ಲಬ್ ಮೂಲಕ ಹಲವು ಕಾರ್ಯಕ್ರಮ ನಡೆಸಲು ಯೋಜನೆ, ಯೋಚನೆಗಳಿದ್ದು, ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಎಂ.ಡಿ.ಅಧಿಕಾರಿ ಪುತ್ಥಳಿಗೆ ಮಾಲಾರ್ಪಣೆ ಬಳಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ರವಿರಾಜ್ ಉಪಾಧ್ಯಾಯ ಸೂರಿಮಣ್ಣು ಮಾರ್ಗದರ್ಶನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅಂಗನವಾಡಿ, ಪಡುಕುಡೂರು ಶಾಲೆ ಮಕ್ಕಳಿಂದ ನೃತ್ಯ ವೈವಿಧ್ಯ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ನಿರ್ದೇಶನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಯರಿಂದ ‘ರುಕ್ಮಿಣಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯಶಿಕ್ಷಕ ಹರೀಶ ಪೂಜಾರಿ ಎಸ್, ಮುನಿಯಾಲು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಟಿ. ಭುಜಂಗ ಶೆಟ್ಟಿ, ಅಧ್ಯಕ್ಷ ಖಜಾನೆ ಸಂದೇಶ ಶೆಟ್ಟಿ, ಮುಖಂಡ ಮುನಿಯಾಲು ಶಂಕರ ಶೆಟ್ಟಿ, ಡಾ.ಕೆ. ಸುದರ್ಶನ್ ಹೆಬ್ಬಾರ್ ಮುನಿಯಾಲು, ಪಡುಕುಡೂರು ಡೈರಿ ಅಧ್ಯಕ್ಷ ಜಗದೀಶ ಹೆಗ್ಡೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಮುನಿಯಾಲು ಸೀತಾರಾಮ ಕಡಂಬ, ಗ್ರಾ.ಪಂ. ಸದಸ್ಯೆ ತಾರಾವತಿ ಶೆಟ್ಟಿ, ಎಸ್‌ಕೆಡಿಆರ್‌ಡಿಪಿ ಮೇಲ್ವಿಚಾರಕಿ ಸುಮಲತಾ, ಮಣಿಪಾಲ ಮುನಿಯಾಲು ಆಯುರ್ವೇದ ಕಾಲೇಜಿನ ಯಶ್ ಅಜಿಲ, ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಭಾಗವಹಿಸಿದ್ದರು. ಶಿಕ್ಷಕಿ ರಂಜಿತಾ ನಿರೂಪಿಸಿದರು. ಶಂಕರ ಶೆಟ್ಟಿ ಮುನಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾವಿನಕಟ್ಟೆ ಸಂತೋಷ ಆಚಾರ್ಯ ಸ್ವಾಗತಿಸಿದರು. ರಕ್ಷಣ್ ಶೆಟ್ಟಿ ವಂದಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಾಧಕರಾದ ರವಿ ಶೆಟ್ಟಿ ಹೊಸಮನೆ (ಹೈನುಗಾರಿಕೆ) ಉದಯ ಪೂಜಾರಿ ತಿಮ್ಮೋಟ್ಟು (ತೋಟಗಾರಿಕೆ) ಸುಮತಿ ಪೂಜಾರಿ ಕೌಂಟೆ (ಭತ್ತ ಬೇಸಾಯ) ಭೋಜ ಪೂಜಾರಿ ಕುಂಜಳಿಗೆ (ಭತ್ತ ಬಿತ್ತನೆ) ನಾಗರಾಜ ಆಚಾರ್ಯ (ಬೆಳ್ಳಿ ಶಿಲ್ಪಿ) ಸುಂದರ ಪೂಜಾರಿ (ಗರಡಿ ಪೂಜಾರಿ) ಅವರಿಗೆ ಊರಿನ ಗೌರವ ಸಮರ್ಪಣೆ ನಡೆಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 85 ದ್ವಿತೀಯ ಪಿಯುಸಿಯಲ್ಲಿ ಶೇ 90 ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಹಿತ ಪ್ರತಿಭಾ ಪುರಸ್ಕಾರ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ದೀಕ್ಷಾ ಆಚಾರ್ ಸಾನ್ವಿಕಾ ಸುಚೀತಾ ಪ್ರಣೀತಾ ಚಿನ್ಮಯ್ ಅವರಿಗೆ ಸನ್ಮಾನ ನಡೆಯಿತು. ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆ ಕಾರ್ಯದಲ್ಲಿ ಸಹಕರಿಸಿದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಸಮಿತಿ ಅಧ್ಯಕ್ಷ ಜಗದೀಶ ಹೆಗ್ಡೆ ಪಟೇಲರಮನೆ ಪತ್ರಕರ್ತ ಸುಕುಮಾರ್ ಮುನಿಯಾಲ್ ಸಹಿತ ಹಲವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.