ADVERTISEMENT

498 ಎಂಡಿಎಂಎ ಡ್ರಗ್ಸ್‌ ಮಾತ್ರೆಗಳ ವಶ

ಮಣಿಪಾಲ ಹಾಗೂ ಉಡುಪಿಯ ಐಎಸ್‌ಡಿ ಘಟಕ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 14:35 IST
Last Updated 4 ಅಕ್ಟೋಬರ್ 2020, 14:35 IST

ಉಡುಪಿ: ಗಾಂಜಾ ಹಾಗೂ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು ಭಾನುವಾರ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಎಂಡಿಎಂಎ (ಎಕ್ಸ್‌ಟಸಿ) ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ₹ 14.94 ಲಕ್ಷ ಮೌಲ್ಯದ 498 ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎಂಐಟಿ ಕಾಲೇಜಿನ ವಿದ್ಯಾರ್ಥಿ ಹಿಮಾಂಶು ಜೋಷಿ ಬಂಧಿತ ಆರೋಪಿಯಾಗಿದ್ದು, ಈತ ಎಂಡಿಎಂಎ ಮಾತ್ರೆಗಳನ್ನು ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಬೈಕ್‌ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಎಡಿಎಂಎ, ಎಕ್ಸ್‌ಟಸಿ ಅಥವಾ ಮೊಲ್ಲಿ ಎಂದು ಕರೆಯಲಾಗುವ ಈ ಮಾತ್ರೆಗಳ ಸೇವನೆ ನಿಷಿದ್ಧವಾಗಿದ್ದು, ನಶೆಗಾಗಿ ಈ ಮಾತ್ರೆಗಳನ್ನು ಬಳಸಲಾಗುತ್ತದೆ. ವಿವಿಧ ಬಣ್ಣ, ಆಕಾರಗಳಲ್ಲಿರುವ ಎಂಡಿಎಂಎ ಲಭ್ಯವಿದ್ದು, ಹೆಚ್ಚಾಗಿ ರೇವ್‌ ಪಾರ್ಟಿಗಳಲ್ಲಿ ಉಪಯೋಗಿಸಲಾಗುತ್ತದೆ. ಎಂಡಿಎಂಎ ಸೇವಿಸಿದ ಅರ್ಧತಾಸಿನ ಬಳಿಕ ವ್ಯಕ್ತಿ ನಶೆಯಲ್ಲಿ ತೇಲಾಡುತ್ತಾನೆ. ಸುಮಾರು 3 ರಿಂದ 6 ತಾಸು ಮತ್ತು ಆವರಿಸಿರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.