ಬೈಂದೂರು: ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಾಗೂರು ಒಡೆಯರ ಮಠ ಶ್ರೀಗೋಪಾಲಕೃಷ್ಣ ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ‘ಸಂಘದ ಸದಸ್ಯರ ಅನುಕೂಲಕ್ಕಾಗಿ ಹಾಲು ಸಂಗ್ರಹಣಾ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಹಿಳಾ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಿದೆ. ಸಂಘವು ಪ್ರಸ್ತುತ ಸಾಲಿನಲ್ಲಿ ₹2.90 ಲಕ್ಷ ಲಾಭ ಗಳಿಸಿದ್ದು, ಹಾಲು ಉತ್ಪಾದಕ ಸದಸ್ಯರಿಗೆ ಶೇ 65 ಬೋನಸ್ ಹಾಗೂ ಸದಸ್ಯರಿಗೆ ಶೇ 15 ಡಿವಿಡೆಂಡ್ ಘೋಷಿಸಲಾಗುವುದು’ ಎಂದರು.
ಉತ್ತಮ ಹಾಲು ಉತ್ಪಾದಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸದಸ್ಯರಿಗೆ ಆರೋಗ್ಯ ಶಿಬಿರ ನಡೆಸಲಾಯಿತು. ಒಕ್ಕೂಟದ ವ್ಯವಸ್ಥಾಪಕ ಶಂಕರ್ ನಾಯ್ಕ ಅವರು, ಪಶು ಆಹಾರದ ಬಗ್ಗೆ ಮಾಹಿತಿ ನೀಡಿದರು.
ವಿಸ್ತರಣಾಧಿಕಾರಿ ರಾಜಾರಾಮ್, ನಿರ್ದೇಶಕರಾದ ಪದ್ಮನಾಭ ಹೆಬ್ಬಾರ್, ಕೆ.ಗೋಪಾಲ ದೇವಾಡಿಗ, ನೀಲಾ, ಸುಬ್ಬು, ಸರೋಜ, ಸುಮಂಗಲ ಕಾರಂತ, ವಿಶಾಲ ದೇವಾಡಿಗ, ಸಿಬ್ಬಂದಿಗಳಾದ ಸಂತೋಷ್ ದೇವಾಡಿಗ, ಪ್ರಕಾಶ್ ನಾಯರಿ, ಶಾಂತದಿನೇಶ್ ಪೂಜಾರಿ, ಇದ್ದರು.
ವಿಶಾಲ ದೇವಾಡಿಗ ಪ್ರಾರ್ಥಿಸಿದರು. ಪದ್ಮನಾಭ ಹೆಬ್ಬಾರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುಣವಂತ ನಾಯರಿ, ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಶಾರದಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.