ADVERTISEMENT

ಭುವನ ಸುಂದರಿ ಸ್ಪರ್ಧೆ; ಉಡುಪಿಯ ಆ್ಯಡ್ಲಿನ್‌ ಮೂರನೇ ರನ್ನರ್‌ಅಪ್‌

​ಪ್ರಜಾವಾಣಿ ವಾರ್ತೆ
Published 17 ಮೇ 2021, 12:12 IST
Last Updated 17 ಮೇ 2021, 12:12 IST
ಆ್ಯಡ್ಲಿನ್‌ ಕಸ್ತಲಿನೊ
ಆ್ಯಡ್ಲಿನ್‌ ಕಸ್ತಲಿನೊ   

ಉಡುಪಿ: ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಉದ್ಯಾವರದ ಆ್ಯಡ್ಲಿನ್‌ ಕಸ್ತಲಿನೊ ಮೂರನೇ ರನ್ನರ್‌ಅಪ್‌ ಪ್ರಶಸ್ತಿ ಪಡೆದಿದ್ದಾರೆ.

ಉದ್ಯಾವರದ ಕೊರಂಗ್ರಪಾಡಿಯ ನಿವಾಸಿಯಾಗಿರುವ ಆಲ್ಫೊನ್ಸಸ್‌ ಕಸ್ತಲಿನೊ ಹಾಗೂ ಮೀರಾ ಕಸ್ತಲಿನೊ ದಂಪತಿ ಪುತ್ರಿಯಾಗಿರುವ ಆ್ಯಡ್ಲಿನ್‌ ಈಚೆಗೆ ಮುಂಬೈನಲ್ಲಿ ನಡೆದ ಲಿವಾ ಮಿಸ್‌ ದಿವಾ ಯುನಿವರ್ಸ್‌–2020 ಸ್ಪರ್ಧೆಯಲ್ಲಿಪ್ರಶಸ್ತಿಮುಡಿಗೇರಿಸಿಕೊಂಡಿದ್ದರು.

ಆ್ಯಡ್ಲಿನ್ ಮಂಬೈನಲ್ಲಿ ಶಿಕ್ಷಣ ಪಡೆದಿದ್ದು, ನಟನೆ, ಕೊರಿಯೊಗ್ರಫಿ ಮಾಡುತ್ತಿದ್ದಾರೆ.ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.