ADVERTISEMENT

ಪಲಿಮಾರು: ರಸ್ತೆ ಕಾಮಗಾರಿಗಳಿಗೆ ಚಾಲನೆ 

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:47 IST
Last Updated 24 ಫೆಬ್ರುವರಿ 2026, 7:47 IST
ಕಾಪು ವಿಧಾನಸಭಾ ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಸೋಮವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ಕಾಪು ವಿಧಾನಸಭಾ ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಸೋಮವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.   

ಕಾಪು (ಪಡುಬಿದ್ರಿ): ಇಲ್ಲಿನ ವಿಧಾನಸಭಾ ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಸೋಮವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಶಾಸಕರ ಶಿಫಾರಸಿನ ಮೇರೆಗೆ ಪಲಿಮಾರು ಪಂಚಾಯಿತಿ ವ್ಯಾಪ್ತಿಯ ಅಡ್ವೆ ಕೆಲ್ಲಾರು ಪಾಂಡು ಪೂಜಾರಿ ಅವರ ಮನೆಯಿಂದ ಕೆಲ್ಲಾರು ದಿವಾಕರ ಶೆಟ್ಟಿ ಅವರ ಮನೆವರೆಗಿನ ರಸ್ತೆ ವಿಸ್ತರಣೆ (₹10 ಲಕ್ಷ), ಗರಡಿ ಬಳಿ ವಿಠಲ ಪೂಜಾರಿ ಮನೆ ಬಳಿಯ ರಸ್ತೆ ಕಾಂಕ್ರೀಟೀಕರಣ (₹10 ಲಕ್ಷ), ಪಲಿಮಾರು ರಥಬೀದಿ ರಸ್ತೆ ವಿಸ್ತರಣೆ (₹10 ಲಕ್ಷ), ನಂದಿಕೂರು ಶೆಟ್ಟಿಗುಡ್ಡೆ ಪ್ರತೀಕ್ ಮನೆ ಬಳಿಯಿಂದ ಕೋಡ್ದಬ್ಬು ದೈವಸ್ಥಾನದವರೆಗೆ ಚರಂಡಿ ರಚನೆ (₹10 ಲಕ್ಷ) ಸೇರಿದಂತೆ ಒಟ್ಟು ₹40 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಪಲಿಮಾರು ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಯೇಶ್ ಪೈ, ಮಾಜಿ ಸದಸ್ಯರಾದ ಗಾಯತ್ರಿ ಪ್ರಭು, ಸುಜಾತ, ಪ್ರವೀಣ್ ಕುಮಾರ್, ರಶ್ಮಿ, ಪ್ರಿಯಾ ಶೆಟ್ಟಿ, ದಿನೇಶ್ ಪಲಿಮಾರು, ದಾಮೋದರ್ ಕೋಟ್ಯಾನ್, ಸದಾನಂದ ಪೂಜಾರಿ, ದಿನೇಶ್ ಶೆಟ್ಟಿ, ಶ್ರೀವರ ಶೆಟ್ಟಿ, ಮುಕುಂದ ಭಟ್, ಪ್ರತೀಕ್ ಕೋಟ್ಯಾನ್, ಸತೀಶ್ ದೇವಾಡಿಗ, ಸುಕೇಶ್ ಕುಲಾಲ್, ಸ್ಥಳೀಯರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.