ADVERTISEMENT

ಶ್ರೀಧರ ಹಂದೆಗೆ ಮುದ್ದಣ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 6:17 IST
Last Updated 21 ಸೆಪ್ಟೆಂಬರ್ 2022, 6:17 IST
ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ನ 2021ನೇ ಸಾಲಿನ ಮಹಾಕವಿ ಮುದ್ದಣ ಪ್ರಶಸ್ತಿಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಂಗಭೂಮಿ ಕಲಾವಿದ ಕೋಟದ ಎಚ್. ಶ್ರೀಧರ ಹಂದೆ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ನ 2021ನೇ ಸಾಲಿನ ಮಹಾಕವಿ ಮುದ್ದಣ ಪ್ರಶಸ್ತಿಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಂಗಭೂಮಿ ಕಲಾವಿದ ಕೋಟದ ಎಚ್. ಶ್ರೀಧರ ಹಂದೆ ಅವರಿಗೆ ಪ್ರದಾನ ಮಾಡಲಾಯಿತು.   

ಬ್ರಹ್ಮಾವರ: ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನೀಡುವ 2021ನೇ ಸಾಲಿನ ‘ಮಹಾಕವಿ ಮುದ್ದಣ ಪ್ರಶಸ್ತಿ’ಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಂಗಭೂಮಿ ಕಲಾವಿದ ಕೋಟದ ಎಚ್. ಶ್ರೀಧರ ಹಂದೆ ಅವರಿಗೆ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಬಸವನಗುಡಿ ಬುಲ್ ಟೆಂಪಲ್ ರಸ್ತೆಯ ಮರಾಠ ಹಾಸ್ಟೆಲ್‌ನ ಸಭಾವೇದಿಕೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

‘ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ಲಲಿತಕಲೆಗಳ ಯಾವುದಾದರೂ ಒಂದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಲ್ಲಿ ಬದುಕು ಉತ್ಸಾಹದಿಂದ ಕೂಡಿರುತ್ತದೆ ಎನ್ನುವುದಕ್ಕೆ ಶಿಕ್ಷಣ, ಯಕ್ಷಗಾನ, ನಾಟಕ, ಸಾಹಿತ್ಯ ರಂಗದಲ್ಲಿ ಬಾಲ್ಯದಿಂದಲೇ ತೊಡಗಿಸಿಕೊಂಡ ಶ್ರೀಧರ ಹಂದೆ ಅವರು ನಿದರ್ಶನ. ಕನ್ನಡನಾಡು ಕಂಡ ಪ್ರಸಿದ್ಧ ಕವಿ ಮುದ್ದಣನ ಹೆಸರಿನ ಪ್ರಶಸ್ತಿಯು ಅರ್ಹ ವ್ಯಕ್ತಿಗೆ ಸಿಕ್ಕಿರುವುದು ಅಭಿನಂದನೀಯ’ ಎಂದು ಜಯಪ್ರಕಾಶ ಹೆಗ್ಡೆ ಹೇಳಿದರು.

ADVERTISEMENT

ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಸಲಹಾ ಮಂಡಳಿಯ ನಿರ್ದೇಶಕ ರಾಜೀವ ಶೆಟ್ಟಿ, ಕಾರ್ಯದರ್ಶಿ ಶ್ಯಾಮ ಸುಂದರ ಐತಾಳ್, ಮಂಗಳಾ ಪಿ. ಉಪಾಧ್ಯ, ತಾರಾ, ಶ್ರೀಧರ ಮಯ್ಯ, ಎಡಬೆಟ್ಟು ಕೃಷ್ಣಮೂರ್ತಿ ಐತಾಳ್ ಇದ್ದರು. ಉಪಾಧ್ಯಕ್ಷ ಡಾ.ವಿಷ್ಣುಮೂರ್ತಿ ಐತಾಳ ಸ್ವಾಗತಿಸಿದರು. ಮಂಜುನಾಥ ವಂದಿಸಿದರು. ಅರುಣ್ ಅಡಿಗ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.