
ಶಿರ್ವ: ಇತಿಹಾಸ ಪ್ರಸಿದ್ಧ ನಡಿಬೆಟ್ಟು ಸೂರ್ಯ ಚಂದ್ರ ಜೋಡುಕರೆ ಸಾಂಪ್ರದಾಯಿಕ ಕಂಬಳ ಸಂಪನ್ನಗೊಂಡಿತು. ಎಲ್ಲೂರು ವಿಶ್ವೇಶ್ವರ ದೇವಳದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ ದೀಪ ಬೆಳಗಿಸಿ, ಕಾಯಿ ಒಡೆದು ಚಾಲನೆ ನೀಡಿದರು.
ನಡಿಬೆಟ್ಟು ಚಾವಡಿಯ ಜುಮಾದಿ ದೈವಕ್ಕೆ ಪೂಜೆ, ಬಳಿಕ ಬಂಟಕೋಲ ನಡೆದು ಮೆರವಣಿಗೆಯಲ್ಲಿ ಡೋಲು, ಕೊಂಬು ವಾದ್ಯ ಘೋಷದೊಂದಿಗೆ ಕೋಣಗಳನ್ನು ಗದ್ದೆಗೆ ಇಳಿಸಲಾಯಿತು. ಹಗ್ಗ ಕಿರಿಯ ವಿಭಾಗದಲ್ಲಿ 50 ಜತೆ ಕೋಣಗಳು, ಹಿರಿಯ ವಿಭಾಗದಲ್ಲಿ 100 ಜತೆ ಕೋಣಗಳು ಭಾಗವಹಿಸಿದ್ದವು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮನೆತನಗಳು ಆಚರಿಸಿಕೊಂಡು ಬರುತ್ತಿರುವ ಕಂಬಳದಂತಹ ದೈವಿಕ ಸ್ಪರ್ಶದ ತುಳುನಾಡಿನ ಸಂಸ್ಕೃತಿ ಪರಂಪರೆಗಳು ಕೊನೆಯಾಗದೆ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಜಾತಿ– ಮತದ ಭೇದವಿಲ್ಲದೆ ಸರ್ವ ಜನಾಂಗದ ಜನ ಭಾಗವಹಿಸುವ ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಕಂಬಳವನ್ನು ಬೆಳೆಸುವ ಕಾರ್ಯ ನಡೆಯಬೇಕಿದೆ ಎಂದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಮುಖಂಡ ಲಾಲಾಜಿ ಆರ್. ಮೆಂಡನ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಗುತ್ತು ಯಜಮಾನ ದಾಮೋದರ ಚೌಟ, ವ್ಯವಸ್ಥಾಪಕ ಶಶಿಧರ ಹೆಗ್ಡೆ, ರತ್ನವರ್ಮ ಹೆಗ್ಡೆ, ಅಟ್ಟಿಂಜ ಪ್ರದೀಪ್ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ ಸೊರ್ಕಳ, ಸಾಯಿನಾಥ್ ಶೆಟ್ಟಿ ಕುತ್ಯಾರು, ರತನ್ ಶೆಟ್ಟಿ, ಶಿವರಾಮ ಶೆಟ್ಟಿ ಪಯ್ಯಾರು, ಸ್ಟ್ಯಾನ್ಲಿ ಡಯಾಸ್, ವೀರೇಂದ್ರ ಶೆಟ್ಟಿ ಪಂಜಿಮಾರು, ಸುಧೀರ್ ಶೆಟ್ಟಿ, ರಾಜೇಶ್ ಶೆಟ್ಟಿ ಕುತ್ಯಾರು, ಕಾಪು ತಾಲ್ಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ ಸೂಡ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಕೆ.ವಿ.ಆಚಾರ್ಯ ಮುಂಬೈ, ವಿಠ್ಠಲ ಅಂಚನ್, ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಲದೂರು, ವೀರೇಂದ್ರ ಪೂಜಾರಿ, ಸುರೇಂದ್ರ ಪೂಜಾರಿ ಕೊಪ್ಪಲ, ಎಸ್.ಕೆ.ಸಾಲಿಯಾನ್ ಬೆಳ್ಮಣ್ ಭಾಗವಹಿಸಿದ್ದರು.
ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ– ನಿಂಜೂರು ಪಡುಮನೆ ಅಮಯ್ ಆದ್ಯ ಶೆಟ್ಟಿ, ಓಡಿಸಿದವರು– ಭಟ್ಕಳ ಶಂಕರ್, ದ್ವಿತೀಯ– ಉಡುಪಿ ಕಕ್ಕುಂಜೆ ರಾಧಾ ನಿಲಯ, ಸಂತೋಷ್ ಶಿವರಾಜ್ ಪೂಜಾರಿ ಎ, ಓಡಿಸಿದವರು– ಮಂದಾರ್ತಿ ಮೂಡುಮನೆ ಶರತ್ ನಾಯಕ್, ಹಗ್ಗ ಅತಿ ಕಿರಿಯ ವಿಭಾಗ ಪ್ರಥಮ– ಪಡೀಲು ಕವತ್ತಾರುಗುತ್ತು ದಿನಕರ ಜಯರಾಜ್ ಶೆಟ್ಟಿ, ಓಡಿಸಿದವರು– ಬೈದೂರು ಮಂಜುನಾಥ ಗೌಡ, ದ್ವಿತೀಯ– ಬೈಲು ಕೌಡೂರು ಕೋರಿಪಡ್ಪು ಮುಂಡಪ್ಪ ಪೂಜಾರಿ, ಓಡಿಸಿದವರು– ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.