ADVERTISEMENT

ಗದಗದ ವೆಲ್‍ನೋನ್ ಸ್ಟ್ರೇರ್ಸ್ ತಂಡ ಪ್ರಥಮ

ವ್ಯೋಮಾ ಡ್ಯಾನ್ಸ್ ಅಕಾಡೆಮಿಯ ನೃತ್ಯಂ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 15:33 IST
Last Updated 6 ಮಾರ್ಚ್ 2023, 15:33 IST
ಉಡುಪಿಯ ಕಿನ್ನಿಮುಲ್ಕಿಯ ಗಣಪತಿ ಮೈದಾನದಲ್ಲಿ ಈಚೆಗೆ ವ್ಯೋಮಾ ಡ್ಯಾನ್ಸ್ ಅಕಾಡೆಮಿಯ ರಾಷ್ಟ್ರೀಯ ಮಟ್ಟದ ‘ನೃತ್ಯಂ-2023’ ಸ್ಪರ್ಧೆಯಲ್ಲಿ ಗದಗದ ವೆಲ್‍ನೋನ್ ಸ್ಟ್ರೇರ್ಸ್ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.
ಉಡುಪಿಯ ಕಿನ್ನಿಮುಲ್ಕಿಯ ಗಣಪತಿ ಮೈದಾನದಲ್ಲಿ ಈಚೆಗೆ ವ್ಯೋಮಾ ಡ್ಯಾನ್ಸ್ ಅಕಾಡೆಮಿಯ ರಾಷ್ಟ್ರೀಯ ಮಟ್ಟದ ‘ನೃತ್ಯಂ-2023’ ಸ್ಪರ್ಧೆಯಲ್ಲಿ ಗದಗದ ವೆಲ್‍ನೋನ್ ಸ್ಟ್ರೇರ್ಸ್ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.   

ಉಡುಪಿ: ಕಿನ್ನಿಮುಲ್ಕಿಯ ಗಣಪತಿ ಮೈದಾನದಲ್ಲಿ ಈಚೆಗೆ ವ್ಯೋಮಾ ಡ್ಯಾನ್ಸ್ ಅಕಾಡೆಮಿಯ ರಾಷ್ಟ್ರೀಯ ಮಟ್ಟದ ‘ನೃತ್ಯಂ-2023’ ಸ್ಪರ್ಧೆಯಲ್ಲಿ ಗದಗದ ವೆಲ್‍ನೋನ್ ಸ್ಟ್ರೇರ್ಸ್ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.

ಉತ್ತಮ ಪ್ರದರ್ಶನ ನೀಡಿದ ವೆಲ್‌ನೋನ್ ತಂಡ ಟ್ರೋಫಿ ಹಾಗೂ ₹ 50,000 ನಗದು ಬಹುಮಾನ ಪಡೆದರೆ, ಮಣಿಪಾಲದ ಬ್ಲಿಟ್ಜ್ ಕ್ರೇಗ್ ದ್ವಿತೀಯ ಸ್ಥಾನದೊಂದಿಗೆ ₹ 25,000 ನಗದು ಟ್ರೋಫಿ ಪಡೆಯಿತು. ಉಡುಪಿಯ ಫೈ ಫೈಯರ್ಸ್‌ ತಂಡ ₹ 15,000 ಹಾಗೂ ಟ್ರೋಫಿ ಪಡೆದುಕೊಂಡಿತು.

ಕಾರ್ಯಕ್ರಮವನ್ನು ಉಡುಪಿ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಮಾರಾಟ ಫೆಡರೇಶನ್‍ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ಗುರ್ಮೆ ಫೌಂಡೇಶನ್ ಪ್ರವರ್ತಕ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ADVERTISEMENT

ಜೇಷ್ಟ ಡೆವಲಪರ್ಸ್ ಮಾಲೀಕ ಯೋಗೀಶ್ ಪೂಜಾರಿ, ಶಟರ್‌ ಬಾಕ್ಸ್‌ ಯ್ಯೂಟ್ಯೂಬರ್ ಸಚಿನ್ ಶೆಟ್ಟಿ, ಕಾಮಿಡಿ ಕಿಲಾಡಿ ಕಾರ್ಯಕ್ರಮ ಖ್ಯಾತಿಯ ರಾಕೇಶ್ ಮಲ್ಪೆ, ದೇಹದಾರ್ಢ್ಯ ಪಟು ಉಮೇಶ್ ಮಟ್ಟು, ಸಂಸ್ಥೆಯ ಗೌರವಾಧ್ಯಕ್ಷಾರಾದ ಮಿಥುನ್ ಪಿ. ಶೆಟ್ಟಿ, ಸುಜಿತ್ ಗಾಣಿಗ, ಸಚಿನ್ ಸುವರ್ಣ ಪಿತ್ರೋಡಿ, ತಾರಕ್ ಕ್ಸೇವಿಯರ್ ಮತ್ತು ಪೂಜಾ ಸಚಿನ್ ಇದ್ದರು.

ಪ್ರಶಾಂತ್ ಶಿಂದೆ ನೃತ್ಯಂ ತೀರ್ಪುಗಾರರಾಗಿದ್ದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ನಿರೂಪಕ ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಿನಿಮಾಟೊಗ್ರಫರ್ ಭುವನೇಶ್ ಪ್ರಭು ಹಿರೇಬೆಟ್ಟು ಸಹಕರಿಸಿದರು.ಮಮತಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.