ADVERTISEMENT

ಪ್ರೀತಿಸಿ ಮದುವೆಯಾದ ದಂಪತಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 3:48 IST
Last Updated 8 ಆಗಸ್ಟ್ 2022, 3:48 IST

ಪಡುಬಿದ್ರಿ: ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಾಪತ್ತೆಯಾಗಿದ್ದು, ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿಕೂರು-ಅಡ್ವೆಯ ತಮ್ಮ ಮನೆಯಿಂದ ಶಿಫಾಶೇಖ್ (25) ಹಾಗೂ ರಿಯಾಜ್(28) ಆಗಸ್ಟ್ 1ರಂದು ಮೊಬೈಲ್ ಖರೀದಿಸಿ ಬರುವುದಾಗಿ ಹೇಳಿ ಉಡುಪಿಗೆ ಹೋದವರು ಮರಳಿ ಬಂದಿಲ್ಲ ಎಂದು ದೂರು ನೀಡಲಾಗಿದೆ.

ರಿಯಾಜ್ ಮಣಿಪಾಲದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಫಾ ತಂದೆ ತಾಯಿ ಮದುವೆಗೆ ಮುಂಚೆ ತೀರಿಕೊಂಡಿದ್ದರು. ಆ ವೇಳೆ ಬಿಎಎಂಎಸ್ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದ ಈಕೆ ಓದು ನಿಲ್ಲಿಸಿ ರಿಯಾಜ್ ಅವರನ್ನು ವಿವಾಹವಾಗಿದ್ದರು. ಈಚೆಗಷ್ಟೇ ಶಿವಮೊಗ್ಗಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಅವರ ಎರಡೂವರೆ ತಿಂಗಳ ಮಗು ತೀರಿಕೊಂಡಿತ್ತು. ರಿಯಾಜ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಶಿಫಾ ಮೊಬೈಲ್‌ ಮನೆಯಲ್ಲೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.