ADVERTISEMENT

ಉಡುಪಿ: ಹೆರಂಜೆ ಕೃಷ್ಣ ಭಟ್‌ಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 15 ಮೇ 2025, 12:59 IST
Last Updated 15 ಮೇ 2025, 12:59 IST
ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿದರು
ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿದರು   

ಉಡುಪಿ: ಈಚೆಗೆ ನಿಧನರಾದ ನಿವೃತ್ತ ಉಪನ್ಯಾಸಕ ಪ್ರೊ. ಹೆರಂಜೆ ಕೃಷ್ಣ ಭಟ್​ ಅವರ ಸ್ಮರಣಾರ್ಥ ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬುಧವಾರ ನುಡಿನಮನ ಕಾರ್ಯಕ್ರಮ ಜರುಗಿತು.

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ, ಹೆರಂಜೆ ಕೃಷ್ಣ ಭಟ್​ ಅವರು ಅತ್ಯಂತ ಜವಾಬ್ದಾರಿಯಿಂದ ಎಲ್ಲ ಕೆಲಸವನ್ನೂ ನಿಭಾಯಿಸುತ್ತಿದ್ದರು. ಎಲ್ಲರೂ ಅವರನ್ನು ಮಿತಭಾಷಿ ಎನ್ನುತ್ತಾರೆ. ನಮ್ಮೊಂದಿಗೆ ಗಂಟೆಗಳ ಕಾಲ ವಿವಿಧ ವಿಚಾರ-ವಿಷಯಗಳಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದರು ಎಂದು ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥರು ಮಾತನಾಡಿದರು. ಎಂ.ಎಲ್​. ಸಾಮಗ, ಪಾದೆಕಲ್ಲು ವಿಷ್ಣು ಭಟ್​, ಎಂ.ಪ್ರಭಾಕರ ಜೋಶಿ, ಕೆ.ಪಿ. ರಾವ್​, ರಾಘವ ನಂಬಿಯಾರ್​, ಭಾಸ್ಕರಾನಂದ ಕುಮಾರ, ಪ್ರದೀಪ ಕಲ್ಕೂರ, ಹರಿರಾಮ ಆಚಾರ್ಯ, ಎನ್​.ಟಿ. ಭಟ್​ ನುಡಿನಮನ ಸಲ್ಲಿಸಿದರು.

ADVERTISEMENT

ಮಠದ ದಿವಾನ ನಾಗರಾಜ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಮಹಿತೋಷ ಆಚಾರ್ಯ, ರಮೇಶ ಭಟ್​, ಬಿ.ಗೋಪಾಲ ಆಚಾರ್ಯ ಇದ್ದರು.

ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.