ADVERTISEMENT

‘ಒಗ್ಗಟ್ಟಿನಿಂದ ಕೋವಿಡ್ ವಿರುದ್ಧ ಹೋರಾಡೋಣ’

​ಪ್ರಜಾವಾಣಿ ವಾರ್ತೆ
Published 11 ಮೇ 2021, 3:57 IST
Last Updated 11 ಮೇ 2021, 3:57 IST
ವಾರಿಜಾ, ಡಾ.ಟಿಎಂಎ ಪೈ ಆಸ್ಪತ್ರೆ ಶುಶ್ರೂಷಕಿ
ವಾರಿಜಾ, ಡಾ.ಟಿಎಂಎ ಪೈ ಆಸ್ಪತ್ರೆ ಶುಶ್ರೂಷಕಿ   

ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಐಸಿಯು ವಾರ್ಡ್‌ನಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಸೋಂಕಿತರ ಆರೈಕೆ ಹಾಗೂ ಚಿಕಿತ್ಸೆ ನೀಡುವ ಹೊಣೆಗಾರಿಕೆ ನಿಭಾಯಿಸುತ್ತಿದ್ದೇನೆ. ಕೋವಿಡ್‌ 2ನೇ ಅಲೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಪ್ರತಿದಿನ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚಾಗುತ್ತಿರುವುದು ಎರಡನೇ ಅಲೆಯ ಗಂಭೀರತೆಗೆ ಸಾಕ್ಷಿ. ಮೊದಲ ಅಲೆಗೆ ಹೋಲಿಸಿದರೆ ಶುಶ್ರೂಷಕಿಯರ ಕಾರ್ಯದೊತ್ತಡ ಬಹಳ ಹೆಚ್ಚಾಗಿದೆ. ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ನರ್ಸ್‌ಗಳು ಬಳಲುತ್ತಿದ್ದಾರೆ. 6 ತಾಸು ಪಿಪಿಸಿ ಕಿಟ್ ಧರಿಸಿ ಚಿಕಿತ್ಸೆ ನೀಡುವಾಗ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಆದರೂ ಸೋಂಕಿತರ ಜೀವ ಉಳಿಸಲು ಒತ್ತಡ ಮೆಟ್ಟಿನಿಂತು ಕರ್ತವ್ಯ ನಿಭಾಯಿಸುತ್ತಿದ್ದೇವೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು, ದಾದಿಯರು ಮಾತ್ರ ಶ್ರಮಿಸಿದರೆ ಸಾಲದು. ಸಮಾಜ ಕೂಡ ಸಹಕಾರ ನೀಡಬೇಕು. ಒಗ್ಗಟ್ಟಾಗಿ ಶ್ರಮಿಸಿದರೆ ಮಾತ್ರ ಕೋವಿಡ್‌ ಮಹಾಮಾರಿಯನ್ನು ತೊಲಗಿಸಬಹುದು. ಅದಕ್ಕೆ ಸಾರ್ವಜನಿಕರು ಮಾಸ್ಕ್ ಧರಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳಬೇಕು, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ. ಕೋವಿಡ್‌ ಬಗ್ಗೆ ಅಸಡ್ಡೆ ತೋರದೆ ಲಸಿಕೆ ಹಾಕಿಸಿಕೊಳ್ಳಿ.

-ವಾರಿಜಾ, ಡಾ.ಟಿಎಂಎ ಪೈ ಆಸ್ಪತ್ರೆ ಶುಶ್ರೂಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT