ಉಡುಪಿ: ಅರಬ್ಬೀ ಸಮುದ್ರದಲ್ಲಿ ಎಂ.ವಿ. ಮಾರ್ಸ್ಕ್ ಫ್ರಾಂಕ್‌ಫರ್ಟ್ ಸರಕು ಸಾಗಣೆ ಕಂಟೈನರ್ ಹಡಗಿಗೆ ಬೆಂಕಿ ಹತ್ತಿಕೊಂಡಿದ್ದು, ಈ ಹಡಗು ಸುಟ್ಟುಹೋದಲ್ಲಿ ಅಥವಾ ಮುಳುಗಿ ಹೋದಲ್ಲಿ ತೈಲ ಸೋರಿಕೆಯಾಗುವ ಅಪಾಯವಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸೂಚಿಸಿದ್ದಾರೆ.
ಹಲವು ದಿನಗಳಿಂದ ಕೋಸ್ಟ್ ಗಾರ್ಡ್ ತಂಡವು ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದೆ. ಪ್ರಸ್ತುತ ಈ ಹಡಗು ಮಂಗಳೂರಿನ ಹತ್ತಿರವಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಡಗಿನಲ್ಲಿ ಅಂತರರಾಷ್ಟ್ರೀಯ ಸಮುದ್ರ ಅಪಾಯಕಾರಿ ಸರಕು (ಐಎಂಡಿಜಿ) ವಿಭಾಗ 4ರ ದಹನಕಾರಿ ಘನ ಹಾಗೂ ದ್ರವಗಳಿರುವುದರಿಂದ ಹಡಗು ಮುಳುಗಡೆಯಾದರೆ, ಈ ವಸ್ತುಗಳು ಸಮುದ್ರದ ತೀರ ಪ್ರದೇಶದ ಮರಳಿನಲ್ಲಿ ಶೇಖರಣೆಯಾಗಬಹುದು ಮತ್ತು ಅದನ್ನು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಶೇಖರಿಸಬಹುದು ಎಂದು ಐಸಿಜಿಎಸ್ ಅಧಿಕಾರಿಗಳು ವಿಡಿಯೊ ಸಂವಾದದಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.