ಬಾರ್ಕೂರು (ಬ್ರಹ್ಮಾವರ): ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೈನ್ಯವನ್ನು ಅಭಿನಂದಿಸಲು ಕರ್ನಾಟಕ ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಬ್ರಹ್ಮಲಿಂಗವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಜ್ಯ ಮುಜರಾಯಿ ಇಲಾಖೆ ಸೂಚನೆಯತೆ ಶನಿವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ನೇತೃತ್ವದಲ್ಲಿ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕ ಸುರೇಶ ಉಪಾಧ್ಯಾಯ ಪೂಜೆ ನೆರವೇರಿಸಿ ಆಶೀರ್ವದಿಸಿದರು.
ಸಹ ಮೊಕ್ತೇಸರ ಭಾಸ್ಕರ ಶೆಟ್ಟಿಗಾರ್ ಸಂತೆಕಟ್ಟೆ, ಯಶೋದಾ ಶ್ರೀನಿವಾಸ ಶೆಟ್ಟಿಗಾರ್, ಶಶಿಕಲಾ ಶೆಟ್ಟಿಗಾರ್, ಇಂದಿರಾ ಸುಕುಮಾರ ಶೆಟ್ಟಿಗಾರ್, ಸಿದ್ಧಕಟ್ಟೆ ದೇವಸ್ಥಾನದ ಭಕ್ತರು, ದೇವಸ್ಥಾನದ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.