ADVERTISEMENT

ಬ್ರಹ್ಮಾವರ: ಮಳೆ ಜೋರು, ಭತ್ತ ನಾಟಿ ಚುರುಕು

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 11:41 IST
Last Updated 17 ಜೂನ್ 2020, 11:41 IST
ಬ್ರಹ್ಮಾವರದ ಕೋಟ ಸಾಲಿಗ್ರಾಮ ಪರಿಸರದಲ್ಲಿ ಭತ್ತ ನಾಟಿ ಕಾರ್ಯ ಆರಂಭವಾಗಿದ್ದು, ಯಂತ್ರಗಳನ್ನು ಬಳಸದೆ, ಮಹಿಳೆಯರಿಂದಲೇ ನಾಟಿ ಕಾರ್ಯ  ನಡೆಯುತ್ತಿರುವುದು ಬುಧವಾರ ಕಂಡು ಬಂತ.
ಬ್ರಹ್ಮಾವರದ ಕೋಟ ಸಾಲಿಗ್ರಾಮ ಪರಿಸರದಲ್ಲಿ ಭತ್ತ ನಾಟಿ ಕಾರ್ಯ ಆರಂಭವಾಗಿದ್ದು, ಯಂತ್ರಗಳನ್ನು ಬಳಸದೆ, ಮಹಿಳೆಯರಿಂದಲೇ ನಾಟಿ ಕಾರ್ಯ  ನಡೆಯುತ್ತಿರುವುದು ಬುಧವಾರ ಕಂಡು ಬಂತ.   

ಬ್ರಹ್ಮಾವರ: ಮುಂಗಾರು ಮಳೆ ಚುರುಕುಗೊಂಡಿದ್ದು, ಕೋವಿಡ್‌ ಮುನ್ನೆಚ್ಚರಿಕೆಯ ಮಧ್ಯೆಯೇ ಭತ್ತನಾಟಿ ಸೇರಿದಂತೆ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

ಕೋಟ ಸಾಲಿಗ್ರಾಮ ಪರಿಸರದಲ್ಲಿ ನಾಟಿ ಕಾರ್ಯ ಆರಂಭವಾಗಿದ್ದು, ಈ ಬಾರಿ ಯಂತ್ರೋಪಕರಣಗಳಿಲ್ಲದೆ ಸ್ಥಳೀಯ ಮಹಿಳೆಯರಿಂದಲೇ ನಾಟಿ ಕಾರ್ಯ ನಡೆಸುತ್ತಿರುವುದು ವಿಶೇಷವಾಗಿದೆ.

‘ಬ್ರಹ್ಮಾವರ ಪರಿಸರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗಿದೆ. ಜೂನ್ 17 ವರೆಗೆ 2019ರಲ್ಲಿ ಕೇವಲ 288.1 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಇದುವರೆಗೆ 824.1ಮಿ.ಮೀ ಮಳೆಯಾಗಿದೆ. ಕಳೆದ 24ಗಂಟೆಗಳಲ್ಲಿ ಬ್ರಹ್ಮಾವರದಲ್ಲಿ 156.2 ಮಿ.ಮೀ. ಮಳೆಯಾಗಿದೆ. ಇದು ಕೃಷಿ ಚಟುವಟಿಕೆಗಳಿಗೆ ಪೂರಕ’ ಎಂದು ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಗ್ರಾಮೀಣ ಕೃಷಿ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ರಂಜಿತ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.