ADVERTISEMENT

ಕಾಪು ಮಾರಿಯಮ್ಮ ದೇಗುಲಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:56 IST
Last Updated 4 ನವೆಂಬರ್ 2025, 7:56 IST
ಉಡುಪಿಯ ವಾದಿರಾಜ ಶೆಟ್ ನೇತೃತ್ವದ ತಂಡದವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು
ಉಡುಪಿಯ ವಾದಿರಾಜ ಶೆಟ್ ನೇತೃತ್ವದ ತಂಡದವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು   

ಕಾಪು (ಪಡುಬಿದ್ರಿ): ಉಡುಪಿಯ ವಾದಿರಾಜ ಶೇಟ್ ನೇತೃತ್ವದ ತಂಡ ಉಚ್ಚಂಗಿ ಮತ್ತು ಕಾಪು ಶ್ರೀ ಮಾರಿಯಮ್ಮನ ಹೊಸ ಮಾರಿಗುಡಿ ದೇವಸ್ಥಾನಕ್ಕೆ  ಪಾದಯಾತ್ರೆ ಮೂಲಕ ಈಚೆಗೆ ತೆರಳಿದರು.

ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ 40 ಜನರ ತಂಡಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಪ್ರಸಾದ ನೀಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ತಂಡದ ಸದಸ್ಯರಾದ ಸತೀಶ್ ಬಂಗೇರ, ನಿತಿನ್ ಪೈ, ದಿನೇಶ್, ಸುಭಾಷ್ ನಾಯ್ಕ್ ದಂಪತಿ, ಕಾರ್ತಿಕ್ ಕಾಮತ್, ಶಿವಾನಂದ ಕಿಣಿ, ಅಮರನಾಥ್, ಸದಾನಂದ ಅಮೀನ್ ಮತ್ತು ತಿಲಕ್ ರಾಜ್ ಭಾಗಿಯಾಗಿದ್ದರು. ಪ್ರತಿ ತಿಂಗಳ ಮೊದಲ ಭಾನುವಾರ ಜಿಲ್ಲೆಯ ಆಸುಪಾಸಿನ ದೇಗುಲಗಳಿಗೆ ಪಾದಯಾತ್ರೆಯ ಮೂಲಕ ಈ ತಂಡ ಭೇಟಿ ನೀಡುತ್ತದೆ.  

ADVERTISEMENT

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.