ADVERTISEMENT

ಪಡುಬಿದ್ರಿ: ಶ್ರೀಕ್ಷೇತ್ರ ಉಚ್ಚಿಲಕ್ಕೆ ವಿದ್ಯುತ್ ಚಾಲಿತ ವಾಹನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:35 IST
Last Updated 4 ಸೆಪ್ಟೆಂಬರ್ 2024, 13:35 IST
ಶ್ರೀ ಕ್ಷೇತ್ರ ಉಚ್ಚಿಲಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಲಿದೆ.
ಶ್ರೀ ಕ್ಷೇತ್ರ ಉಚ್ಚಿಲಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಲಿದೆ.   

ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಹನ ಹಸ್ತಾಂತರ ಕಾರ್ಯಕ್ರಮ ಗುರುವಾರ (ಅ.4) ನಡೆಯಲಿದೆ.

ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ ಅನುದಾನದಿಂದ ದೇವಸ್ಥಾನಕ್ಕೆ ₹5,20,750 ವೆಚ್ಚದ 6 ಆಸನಗಳ ವಿದ್ಯುತ್ ಚಾಲಿತ ವಾಹನ ಕೊಡಮಾಡಿದೆ. ಇದರ ಹಸ್ತಾಂತರ ಕಾರ್ಯಕ್ರಮವು ಮಧ್ಯಾಹ್ನ 3ಕ್ಕೆ ಶ್ರೀಕ್ಷೇತ್ರದ ವಠಾರದಲ್ಲಿ ಕರ್ನಾಟಕ ಬ್ಯಾಂಕ್‌ನ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT