ADVERTISEMENT

ಉಡುಪಿ | ಅಪಘಾತ: ಪಾದಾಚಾರಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 15:19 IST
Last Updated 14 ಜನವರಿ 2025, 15:19 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಪಡುಬಿದ್ರಿ (ಉಡುಪಿ): ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಸೀದಿ ಬಳಿ ಮಂಗಳವಾರ ಬೆಳಿಗ್ಗೆ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕೂಲಿ ಕಾರ್ಮಿಕ ಹಾವೇರಿ ಜಿಲ್ಲೆ ಹಾನಗಲ್ ಮೂಲದ ಕರಿಭೀಮಣ್ಣನವರ್ (48) ಮೃತಪಟ್ಟಿದ್ದಾರೆ.

ಮುಂಜಾನೆ ಅಪಘಾತ ಸಂಭವಿಸಿದ್ದು, ಮಂಗಳೂರು ಕಡೆಯಿಂದ ಉಡುಪಿ ಕಡೆ ವಾಹನ ತೆರಳುತ್ತಿತ್ತು. ಕತ್ತಲೆ ಇದ್ದರಿಂದ ಬೀದಿ ದೀಪ ಇಲ್ಲದ ಕಾರಣ ಹಲವು ವಾಹನಗಳು ಮೃತದೇಹದ ಮೇಲೆ ಚಲಿಸಿ ಗುರುತು ಹಿಡಿಯಲಾರದಷ್ಟು ಛಿದ್ರಗೊಂಡಿತ್ತು. ಮೃತ ವ್ಯಕ್ತಿಯ ಬಳಿಯಿದ್ದ ಚೀಟಿಯ ಮೂಲಕ ದೂರವಾಣಿ ಕರೆ ಮಾಡಿ ಸಂಬಂಧಿಕರ ಮೂಲಕ ಗುರುತು ಪತ್ತೆಹಚ್ಚಲಾಯಿತು.

ADVERTISEMENT

ಸ್ಥಳೀಯರು ಆಕ್ರೋಶಗೊಂಡು ಪಡುಬಿದ್ರಿ ಠಾಣೆಗೆ ತೆರಳಿ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಅವರಲ್ಲಿ, ಘಟನೆಗೆ ಹೆದ್ದಾರಿ ಇಲಾಖೆಯೇ ಕಾರಣವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ದೂರು ಸಲ್ಲಿಸಿದರು. ದೂರಿನಲ್ಲಿ ರಾ.ಹೆ. 66 ಯೋಜನಾ ನಿರ್ದೇಶಕ, ಟೋಲ್ ಮ್ಯಾನೇಜರ್ ಮತ್ತು ಡಿಕ್ಕಿ ಹೊಡೆದ ವಾಹನದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.