ಪಡುಬಿದ್ರಿ: ಇಲ್ಲಿನ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಈಶ್ವರ ದೇವರ ಗರ್ಭಗುಡಿಯ ಚಾವಣಿ ನಿರ್ಮಾಣ ಕಾರ್ಯಗಳಿಗೆ ಗುರುವಾರ ಚಾಲನೆ ನೀಡಲಾಯಿತು.
ಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ಶ್ರೀರಾಧಾಕೃಷ್ಣ ಉಪಾಧ್ಯಾಯ ಹಾಗೂ ಶಿವರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ, ವಾಸ್ತು ತಜ್ಞ ಕುಡುಪು ಕೃಷ್ಣರಾಜ ತಂತ್ರಿ ಉಪಸ್ಥಿತಿಯಲ್ಲಿ ಅಸ್ತ್ರಯಾಗ ಪುರಸ್ಸರ, ಶುದ್ಧ ಪುಣ್ಯಾಹ, ಪ್ರಾರ್ಥನೆಗಳು ನೆರವೇರಿದ ಬಳಿಕ ಗರ್ಭಗುಡಿಯ ಮಾಡಿನ ಮರಗಳಿಗೆ ಪೂಜೆ ಸಲ್ಲಿಸಲಾಯಿತು.
ವಿಶ್ವಕರ್ಮ ಶಿಲ್ಪಿಗಳಾದ ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ ಕಲ್ಲಮುಂಡ್ಕೂರು ಅವರಿಗೆ ಪ್ರಸಾದ ವಿತರಿಸಲಾಯಿತು. ಬಳಿಕ ದಾರುಸ್ತಂಭಗಳನ್ನು ಗರ್ಭಗುಡಿಯ ಸ್ವಸ್ಥಾನದಲ್ಲಿರಿಸಿ ಚಾವಣಿಯ ಕಾರ್ಯಗಳಿಗೆ ಶುಭಾರಂಭ ನೀಡಲಾಯಿತು.
ದೇಗುಲದ ಅರ್ಚಕರಾದ ಪದ್ಮನಾಭ ಭಟ್, ವೈ.ಗುರುರಾಜ ಭಟ್, ಗಣಪತಿ ಭಟ್ ಎರ್ಮಾಳು, ಅನುವಂಶಿಕ ಮೊಕ್ತೇಸರ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್, ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್, ನವೀನ್ ಚಂದ್ರ ಜೆ. ಶೆಟ್ಟಿ, ಪಿ.ಕೆ. ಸದಾನಂದ, ಭಾಸ್ಕರ್ ಕೆ., ಪ್ರಕಾಶ್ ದೇವಾಡಿಗ, ಸುಕುಮಾರ್ ಶ್ರೀಯಾನ್ ನವೀನ್ ಎನ್. ಶೆಟ್ಟಿ, ಬೆಂಗಳೂರಿನ ಉದ್ಯಮಿ ಅನಂತ್ ರಾಜ ರಾವ್, ಡಾ.ದೇವಿಪ್ರಸಾದ್ ಶೆಟ್ಟಿ, ಶೀನ ಪೂಜಾರಿ ಕಣ್ಣಂಗಾರು, ವೈ.ಎನ್. ರಾಮಚಂದ್ರ ರಾವ್, ಸದಾಶಿವ ಆಚಾರ್ಯ, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಜನಾರ್ದನ ಶರ್ಮ, ನಟರಾಜ ಪಿ.ಎಸ್., ಅನಿಲ್ ಕುಮಾರ್ ಶೆಟ್ಟಿ, ಗುತ್ತಿನಾರ್ ಕೃಷ್ಣ ಶೆಟ್ಟಿ, ಗುತ್ತಿನಾರ್ ವಿಶುಕುಮಾರ್ ಶೆಟ್ಟಿಬಾಲ್, ಮುರಳೀನಾಥ ಶೆಟ್ಟಿ, ಸುಮತಿ ಹೆಗ್ಡೆ, ರಮಾಕಾಂತ ರಾವ್, ಗುಡ್ಡೆಚ್ಚಿ ನಾರಾಯಣ ರಾವ್, ರವೀಂದ್ರ ಶರ್ಮ, ಪ್ರಕಾಶ್ ಶೆಟ್ಟಿ ಪಡುಹಿತ್ಲು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.