
ಶಿರ್ವ: ಮಂಗಳೂರಿನ ಕಥಾಬಿಂದು ಪ್ರಕಾಶನದ ವತಿಯಿಂದ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ 2026 ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದ ‘ಪಂಜುರ್ಲಿ’ ಕೃತಿ ಲೋಕಾರ್ಪಣೆ ಮಾಡಲಾಯಿತು.
ಕೃತಿ ಲೋಕಾರ್ಪಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ತುಳುನಾಡಿನ ದೈವ ಪಂಜುರ್ಲಿಯ ಕುರಿತು ಪ್ರಕಾಶ ಸುವರ್ಣ ಅವರು ಅಧ್ಯಯನ ನಡೆಸಿ ಬರೆದಿರುವ ಕೃತಿ ಮೌಲ್ಯಯುತವಾಗಿದ್ದು, ಯುವಪೀಳಿಗೆಗೆ ದೈವಾರಾಧನೆ ಕುರಿತು ಸ್ಪಷ್ಟ ಚಿತ್ರಣ ನೀಡಲಿದೆ ಎಂದರು.
ಭಯಂಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ರಘುನಾಥ್ ಸೋಮಯಾಜಿ, ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್, ಸಾಹಿತಿ ಕೊಳ್ಚಪ್ಪೆ ಗೋವಿಂದ ಭಟ್, ತೇವು ತಾರನಾಥ ಕೊಟ್ಟಾರಿ, ಬಂಟ್ವಾಳ ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಜಯಾನಂದ ಪೆರಾಜೆ, ಡಾ.ಶಾಂತಾ ಪುತ್ತೂರು, ಡಾ.ಜೋಸೆಫ್ ಲೋಬೊ ಶಂಕರಪುರ, ರಕ್ತದಾನಿ ಮಂಜು ಮೈಸೂರು, ನೀಮಾ ಲೋಬೊ, ಪದ್ಮನಾಭ ಆರ್. ಕೋಟ್ಯಾನ್, ದೇವಕಿ ಮಣಿಪಾಲ ಪಾಲ್ಗೊಂಡಿದ್ದರು.
ಮಂಗಳೂರಿನ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ.ವಿ. ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಕೊಟ್ಟಾರಿ ಸ್ವಾಗತಿಸಿದರು. ಶೋಭಾ ದಿನೇಶ್ ಉದ್ಯಾವರ, ಸನ್ಮತಿ ಇಂದ್ರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.