ADVERTISEMENT

ಕಾರ್ಕಳ ಶಾಸಕರಿಂದ ರಾಜ್ಯದ್ರೋಹ: ಕಾಂಗ್ರೆಸ್‌ ನಾಯಕ ಶುಭದರಾವ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 23:34 IST
Last Updated 16 ಜುಲೈ 2025, 23:34 IST
ಕಾರ್ಕಳ ತಾಲ್ಲೂಕಿನ ಉಮಿಲ್ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದ್ದ ಪರಶುರಾಮನ ಕಂಚಿನ ಪ್ರತಿಮೆಯ ಅರ್ಧ ಭಾಗ ತೆರವುಗೊಳಿಸಿರುವುದು
ಕಾರ್ಕಳ ತಾಲ್ಲೂಕಿನ ಉಮಿಲ್ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದ್ದ ಪರಶುರಾಮನ ಕಂಚಿನ ಪ್ರತಿಮೆಯ ಅರ್ಧ ಭಾಗ ತೆರವುಗೊಳಿಸಿರುವುದು   

ಉಡುಪಿ: ‘ಪರಶುರಾಮನ ಕಂಚಿನ ಮೂರ್ತಿ ನಿರ್ಮಾಣ ಮಾಡಿದ್ದೇನೆ ಎಂದು ಹೇಳಿ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಚಿವರನ್ನು ಕರೆಸಿ ನಕಲಿ ಮೂರ್ತಿ ಉದ್ಘಾಟನೆ ಮಾಡಿಸಿ ರಾಜ್ಯದ್ರೋಹ ಎಸಗಿದ್ದಾರೆ’ ಎಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದರಾವ್‌ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಶಾಸಕರ ತಪ್ಪಿನಿಂದಾಗಿ ಸರ್ಕಾರಿ ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ’ ಎಂದರು.

ಸುನಿಲ್‌ ಕುಮಾರ್‌ ಅವರು ಕಾರ್ಕಳದ ಜನರ ಕ್ಷಮೆ ಯಾಚಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.