ADVERTISEMENT

ಕಾರ್ಕಳ: ಪರಶುರಾಮ ಮೂರ್ತಿ ಪುನ‌ರ್ ಪ್ರತಿಷ್ಠಾಪನೆ ಕೋರಿಗೆ ಹೈಕೋರ್ಟ್‌ಗೆ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 18:51 IST
Last Updated 31 ಜುಲೈ 2025, 18:51 IST
ಪರಶುರಾಮ ಮೂರ್ತಿ
ಪರಶುರಾಮ ಮೂರ್ತಿ   

ಕಾರ್ಕಳ (ಉಡುಪಿ): ತಾಲ್ಲೂಕಿನ ಬೈಲೂರು ಪರಶುರಾಮ ಥೀಂ ಪಾರ್ಕ್‌ನಲ್ಲಿ ಪರಶುರಾಮನ ಕಂಚಿನ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

ಮೂರ್ತಿಯನ್ನು ಹೊಸದಾಗಿ ನಿರ್ಮಿಸಿ, ಪ್ರತಿಷ್ಠಾಪಿಸಬೇಕು. ಇದಕ್ಕಾಗಿ ಹೊಸ ಟೆಂಡ‌ರ್ ಕರೆದು ಶಿಲ್ಪಿಯನ್ನು ನೇಮಿಸಬೇಕು ಎಂದೂ ಅರ್ಜಿಯಲ್ಲಿ ಕೋರಿದ್ದಾರೆ.

‘ಥೀಂ ಪಾರ್ಕ್‌ನಲ್ಲಿ ಕಂಚಿನ ಪ್ರತಿಮೆ ಬದಲಿಗೆ ಫೈಬರ್ ಮತ್ತು ಇತರ ವಸ್ತುಗಳಿಂದ ರೂಪಿಸಿದ ಮೂರ್ತಿ ಸ್ಥಾಪಿಸಲಾಗಿದೆ’ ಎಂದು ಕಾಂಗ್ರೆಸ್‌ ನಾಯಕರು ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಈಚೆಗೆ ಕೋರ್ಟ್‌ಗೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ‘ಪ್ರತಿಮೆ ಹಿತ್ತಾಳೆಯದ್ದು’ ಎಂದು ಉಲ್ಲೇಖಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.