ADVERTISEMENT

ಕಟಪಾಡಿ: ಎರಡು ಹೆಬ್ಬಾವು, 31 ಮೊಟ್ಟೆ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಮೇ 2020, 13:05 IST
Last Updated 10 ಮೇ 2020, 13:05 IST
ಕಟಪಾಡಿಯಲ್ಲಿ ಪತ್ತೆಯಾದ ಎರಡು ಹೆಬ್ಬಾವು ಸಹಿತ 31 ಮೊಟ್ಟೆಗಳು
ಕಟಪಾಡಿಯಲ್ಲಿ ಪತ್ತೆಯಾದ ಎರಡು ಹೆಬ್ಬಾವು ಸಹಿತ 31 ಮೊಟ್ಟೆಗಳು   

ಶಿರ್ವ: ಕಟಪಾಡಿ ವಿಶ್ವನಾಥ ದೇಗುಲದ ಬಳಿಯ ಕಲ್ಲಾಪು ಕೆ.ರಾಮಚಂದ್ರ ಪೈ ಎಂಬುವರ ಮನೆಯ ನಿರುಪಯುಕ್ತ ಶೆಡ್ ಒಳಗಡೆ ಎರಡು ಹೆಬ್ಬಾವುಗಳು ಮತ್ತು ಅವುಗಳ 31 ಮೊಟ್ಟೆಗಳು ಪತ್ತೆಯಾಗಿವೆ.

ಭಾರಿ ಗಾತ್ರದ ಎರಡು ಹೆಬ್ಬಾವುಗಳು ಒಂದೇ ಕಡೆ ಮೊಟ್ಟೆಗಳನ್ನು ಇಟ್ಟು ಕಾವು ಕೊಡುತ್ತಿದ್ದವು. ಒಂದು ಹೆಬ್ಬಾವಿನ 16 ಮತ್ತು ಇನ್ನೊಂದು ಹೆಬ್ಬಾವಿನ 16 ಮೊಟ್ಟೆಗಳನ್ನು ಪ್ರತ್ಯೇಕ ಗೊಳಿಸಿ ಎರಡೂ ಹೆಬ್ಬಾವುಗಳನ್ನು ಅರಣ್ಯ ಇಲಾಖಾಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಕೂಡಾ ಇದೇ ಪ್ರದೇಶದಲ್ಲಿ ದೊಡ್ಡ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದ್ದು, ಕಟಪಾಡಿಯ ಮನು ಪೈ ಅವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT