ADVERTISEMENT

ಉಡುಪಿ: ಗುಡುಗು ಸಿಡಿಲು ಸಹಿತ ಮಳೆ

ಬೇಸಗೆಯ ಬೇಗೆಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 14:39 IST
Last Updated 7 ಏಪ್ರಿಲ್ 2020, 14:39 IST
ಮಂಗಳವಾರ ನಗರದಲ್ಲಿ ಕೆಲಕಾಲ ಗುಡುಗು ಸಿಡಿಲು ಸಹಿತ ಬಿರುಸಾಗಿ ಮಳೆ ಸುರಿಯಿತು.
ಮಂಗಳವಾರ ನಗರದಲ್ಲಿ ಕೆಲಕಾಲ ಗುಡುಗು ಸಿಡಿಲು ಸಹಿತ ಬಿರುಸಾಗಿ ಮಳೆ ಸುರಿಯಿತು.   

ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರ ಗುಡುಗು ಸಿಡಿಲು ಸಹಿತ ಬಿರುಸಾದ ಮಳೆ ಸುರಿಯಿತು. ಹೆಬ್ರಿ, ಬ್ರಹ್ಮಾವರ, ಪಡುಬಿದ್ರಿ, ಉಡುಪಿ, ಬೈಂದೂರು, ಕುಂದಾಪುರ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು.

ಬೇಸಗೆಯ ದಗೆಗೆ ಕಂಗೆಟ್ಟಿದ್ದ ಸಾರ್ವಜನಿಕರಿಗೆ ವರ್ಷದ ಮೊದಲ ಮಳೆ ತಂಪೆರೆದ ಅನುಭವ ನೀಡಿತು. ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣ ಇತ್ತು. ಏಕಾಏಕಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸಿಡಿಲು, ಗುಡುಗಿನ ಆರ್ಭಟದೊಂದಿಗೆ ಕೆಲಹೊತ್ತು ಜೋರಾದ ಮಳೆ ಸುರಿಯಿತು.

ಗುಡುಗು ಸಿಡಿಲು ಹೆಚ್ಚಾಗುತ್ತಿದ್ದಂತೆಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಯಿತು. ಒಂದೆರಡು ಕರೆಂಟ್ ಇರಲಿಲ್ಲ. ರಸ್ತೆಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದವು. ಜೋರು ಗಾಳಿ ಇಲ್ಲವಾದ್ದರಿಂದ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.