ಕೋಟ (ಬ್ರಹ್ಮಾವರ): ಕುಂದಾಪ್ರ ಭಾಷೆಗೆ ತನ್ನದೇ ಅಸ್ತಿತ್ವ ಇದೆ. ಅದರ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಿದೆ ಎಂದು ಕೋಟದ ಸಕಡ್ ಫೌಂಡೇಷನ್ ಪ್ರವರ್ತಕ ಕೋಟ ಶ್ರೀಕಾಂತ ಶೆಣೈ ಹೇಳಿದರು.
ಹಂದಟ್ಟು ಪರಿಸರದಲ್ಲ ಆ.11ರಂದು ಪಂಚವರ್ಣ ಮಹಿಳಾ ಮಂಡಳಿ ನೇತೃತ್ವದಲ್ಲಿ ನಡೆಯಲಿರುವ ಆಸಾಡಿ ಒಡ್ರ್ ಕಾರ್ಯಕ್ರಮದ ಪೂರ್ವಭಾವಿ ಕ್ರೀಡಾಕೂಟಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕುಂದಗನ್ನಡದ ಗ್ರಾಮೀಣ ರಾಯಬಾರಿ ಎಂ.ಜಯರಾಮ ಶೆಟ್ಟಿ ಕುಂದಾಪ್ರ ಭಾಷೆ ಬದುಕು ಹಾಗೂ ಕ್ರೀಡೆಗಳ ಬಗೆಗಿನ ಕುರಿತು ಮಾತನಾಡಿದರು.
ಪಂಚವರ್ಣ ಮಹಿಳಾ ಮಂಡಳಿ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸಾಲಿಗ್ರಾಮ ವಿಪ್ರ ಮಹಿಳಾ ವಲಯದ ಮಾಜಿ ಅಧ್ಯಕ್ಷೆ ಜಾಹ್ನವಿ ಹೇರ್ಳೆ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನ ಪೂಜಾರಿ ಭಾಗವಹಿಸಿದ್ದರು.
ಮಹಿಳಾ ಮಂಡಳಿ ಸದಸ್ಯೆ ವೀಣಾ ಪೂಜಾರಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಸುಜಾತ ಬಾಯರಿ ವಂದಿಸಿದರು.
ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಕೋಲ, ಢಕ್ಕೆಬಲಿ, ಹೌಂದರಾಯನ ವಾಲ್ಗವೆ , ಹೊಸ್ತಿಲು ಅಜ್ಜಿ, ಹಿರಿಯರ ಮಳೆಗಾಲದ ಆಹಾರ ಪದ್ಧತಿ, ಹಪ್ಪಳ, ಉಪ್ಪಿನಕಾಯಿ ಮಾಡುವುದು, ಹೊಸ್ತು, ಹೋರಿಗೆ ಏರ್ತಾ ಬಿಡುದ್, ಗಣಪತಿ ನಟ್ಟಿ, ಹೊಟ್ಟು ಸುಡುದ್, ಹೋಳಿ ಹಬ್ಬ, ಕೊಯ್ಲು ಕುರಿತು ಮಕ್ಕಳಿಗೆ ಭಾಷಣ ಸ್ಪರ್ಧೆ, ಹಿಡಿ ಕಡ್ಡಿ ನೇಯುವ ಸ್ಪರ್ಧೆ, ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಂದಟ್ಟು ಮಹಿಳಾ ಬಳಗ ಸಹಕಾರ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.