
ಪ್ರಜಾವಾಣಿ ವಾರ್ತೆಬಂಧನ
(ಪ್ರಾತಿನಿಧಿಕ ಚಿತ್ರ)
ಕಾಪು (ಪಡುಬಿದ್ರಿ): ದಾಂಪತ್ಯ ಸಮಸ್ಯೆ ಕಾರಣದಿಂದ ಕೌನ್ಸಿಲಿಂಗ್‌ಗೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಿರಂಜನ ಶೇಖರ ಶೆಟ್ಟಿ (52) ಬಂಧಿತ ಆರೋಪಿ. ಸಂತ್ರಸ್ತ ಮಹಿಳೆಯು ದಾಂಪತ್ಯ ಸಮಸ್ಯೆಯ ಕಾರಣದಿಂದ ಕೌನ್ಸಿಲಿಂಗ್‌ಗಾಗಿ ಮೂಳೂರು ಗ್ರಾಮದ ಕಂಕಣಗುತ್ತು ಕಂಪೌಂಡ್‌ನಲ್ಲಿರುವ ಸುನಂದಾ ವೆಲ್‌ನೆಸ್ ಸೆಂಟರ್‌ಗೆ ಬಂದಿದ್ದು, ಆರೋಪಿಯು ಕೌನ್ಸಿಲಿಂಗ್ ಮಾಡುವಾಗ ದೈಹಿಕ ಸ್ಪರ್ಶ ಮಾಡಿ, ಲೈಂಗಿಕ ಕಿರುಕುಳ ನೀಡಿರುವುದಾಗಿ ಸಂತ್ರಸ್ತೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.