ADVERTISEMENT

ಶಿರಿಯಾರ: ‘ಸೌಹಾರ್ದ ಸಿರಿ’ ಕಟ್ಟಡ ಉದ್ಘಾಟನೆ

ಸಹಕಾರಿ ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ ಮುಖ್ಯ: ಕಿರಣ್‌ ಕುಮಾರ್‌ಕೊಡ್ಗಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 7:14 IST
Last Updated 14 ಜುಲೈ 2025, 7:14 IST
ಸಾಹೇಬರಕಟ್ಟೆ ಶಿರಿಯಾರ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ‘ಸೌಹಾರ್ದ ಸಿರಿ’ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು
ಸಾಹೇಬರಕಟ್ಟೆ ಶಿರಿಯಾರ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ‘ಸೌಹಾರ್ದ ಸಿರಿ’ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು   

ಬ್ರಹ್ಮಾವರ: ಸಹಕಾರಿ ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನ ಮುಖ್ಯ. ಎಲ್ಲರ ಉದ್ದೇಶ ಒಂದೇ ಆಗಿದ್ದರೆ ಸಂಸ್ಥೆ ಅಭಿವೃದ್ಧಿಯಾಗುತ‌್ತದೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು  ಭಾನುವಾರ ಸಾಹೇಬರಕಟ್ಟೆ ಶಿರಿಯಾರ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಭದ್ರತಾ ಕೋಶ ಉದ್ಘಾಟಿಸಿ ಮಾತನಾಡಿದ ಗರಿಕೆಮಠ ಅರ್ಕ ಮಹಾಗಣಪತ ದೇವಸ್ಥಾನದ ಅರ್ಚಕ ರಾಮಪ್ರಸಾದ ಅಡಿಗ, ಜಿಎಸ್‌ಬಿ ಸಮಾಜದ ಪ್ರತಿಯೊಬ್ಬರೂ ಕಠಿಣ ಶ್ರಮಿಗಳು. ವ್ಯವಹಾರ ಚತುರರು. ಸೇವಾ ಮನೋಭಾವ ಉಳ್ಳವರು. ಇಂತಹ ಸಮಾಜದ ಮುಖಂಡರ ಸೌಹಾರ್ದ ಸಹಕಾರಿ ಸಂಘ ಹತ್ತಾರು ಶಾಖೆಗಳನ್ನು ಸ್ಥಾಪಿಸುವಂತಾಗಲಿ ಎಂದು ಶುಭ ಹಾರೈಸಿದರು.

ADVERTISEMENT

ಸಂಘದ ಅಧ್ಯಕ್ಷ ಸಾಹೇಬರಕಟ್ಟೆ ಅಶೋಕ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್, ಅಧ್ಯಕ್ಷ ಅಶೋಕ ಪ್ರಭು ದಂಪತಿಯನ್ನು ಸನ್ಮಾನಿಸಲಾಯಿತು.

‘ಸೌಹಾರ್ದ ಸಿರಿ’ ಕಟ್ಟಡವನ್ನು ಶಿರಾಲಿಯ ಮಹಾಗಣಪತಿ ಮಾಹಮ್ಮಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಿನಾಥ್ ಕಾಮತ್, ಭದ್ರತಾ ಕೊಠಡಿಯನ್ನು ಪಾಂಡುರಂಗ ನಾಯಕ್, ಆಡಳಿತ ಕಚೇರಿ ಸಭಾಂಗಣವನ್ನು ಶಿರಿಯಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಅಧ್ಯಕ್ಷರ ಕೊಠಡಿಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿರ್ದೇಶಕ ಎಸ್.ಕೆ. ಮಂಜುನಾಥ, ಗಣಕಯಂತ್ರವನ್ನು ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ ಬಲ್ಲಾಳ ಉದ್ಘಾಟಿಸಿದರು. ‘ಸೌಹಾರ್ದ ಸಿರಿ’ ಠೇವಣಿ ಪತ್ರವನ್ನು ಸ್ಥಾಪಕಾಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್ ಹಸ್ತಾಂತರಿಸಿದರು.

ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಯು. ರಾಜೀವ ಭಟ್ ಉಪ್ಪುಂದ, ಸಂಘದ ಉಪಾಧ್ಯಕ್ಷ ಎಚ್. ನಾರಾಯಣ ಶೆಣೈ ಗಾವಳಿ, ಸಂಘದ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ, ವೆಂಕಟೇಶ ಪೈ ಸಾಸ್ತಾನ, ಪ್ರಸಾದ ಆರ್. ಭಟ್, ಜಗದೀಶ ಹೆಗ್ಡೆ, ರಾಘವೇಂದ್ರ ಪ್ರಭು, ಪಲ್ಲವಿ ವೈ. ನಾಯಕ್, ಸುನೀತಾ ಹೆಗ್ಡೆ ಭಾಗವಹಿಸಿದ್ದರು.

ಕಾರ್ಯ ನಿರ್ವಹಣಾಧಿಕಾರಿ ಎತ್ತಿನಟ್ಟಿ ಶಿವಾನಂದ ಶ್ಯಾನುಭಾಗ್ ವರದಿ ಮಂಡಿಸಿದರು. ನಿರ್ದೇಶಕ ಎಂ. ರವೀಂದ್ರನಾಥ ಕಿಣಿ ಸ್ವಾಗತಿಸಿದರು. ನಿರ್ದೇಶಕ ಮಾಧವ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು. ಪ್ರಸಾದ್ ಭಟ್ ವಂದಿಸಿದರು. ಗಣೇಶ ನಾಯಕ್ ಶಿರಿಯಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.