ಶಿರ್ವ: ಪ್ರಯೋಗಗಳ ಮೂಲಕ ಕರಾವಳಿಯಲ್ಲಿ ದೇಶ ವಿದೇಶದ ಹೂ ಹಣ್ಣು, ತರಕಾರಿ ಕೃಷಿ ಮಾಡಿ ಯಶಸ್ಸು ಸಾಧಿಸಿರುವ ಕೃಷಿಕ ದಂಪತಿ, ಉಡುಪಿ ಜಿಲ್ಲೆ ಶಂಕರಪುರದ ಜೋಸೆಫ್ ಲೋಬೊ ಮತ್ತು ನೀಮಾ ಲೋಬೊ ವಿಶ್ವವಿಖ್ಯಾತ ಮಿಯಾಜಾಕಿ ಮಾವಿನ ಹಣ್ಣು ತಾರಸಿ ಮೇಲೆ ಬೆಳೆದಿದ್ದಾರೆ.
ಕಳೆದ ವರ್ಷ ಪ್ರಾಯೋಗಿಕವಾಗಿ ಮಿಯೋಜಾಕಿ ಬೆಳೆಸಿದ್ದ ದಂಪತಿ ಈಗ ಪೂರ್ಣಪ್ರಮಾಣದಲ್ಲಿ ಬೆಳೆ ತೆಗೆದಿದ್ದಾರೆ. ಜಪಾನ್ ಮೂಲದ ಮಿಯಾಜಾಕಿ ಮಾವಿನಹಣ್ಣಿಗೆ ವಿಶ್ವ ಮಾರುಕಟ್ಟೆಯಲ್ಲಿ ಕಿಲೋ ಒಂದಕ್ಕೆ ₹ 2.74 ಲಕ್ಷ ಬೆಲೆ ಇದೆ. ಕೃಷಿ ಅಧ್ಯಯನ, ತರಬೇತಿ, ನರ್ಸರಿ, ತೋಟಗಾರಿಕೆಯಲ್ಲಿ ಇಡೀ ಕುಟುಂಬವು ನಿರತವಾಗಿದ್ದು ಅವರ ತಾರಸಿ ಹಾಗೂ ಮನೆಯ ಸುತ್ತ 400ಕ್ಕೂ ಅಧಿಕ ಜಾತಿಯ ಗಿಡಗಳಿವೆ. ಅವುಗಳಿಂದ ಹಣ್ಣುಗಳನ್ನು ಪಡೆಯುತ್ತಿದ್ದಾರೆ. ಸಾವಯವ ಕೃಷಿ ಜೊತೆಗೆ ಹೈನುಗಾರಿಕೆ, ಜೇನು ಸಾಕಾಣಿಕೆಯನ್ನು ಕೂಡಾ ಮಾಡುತ್ತಿದ್ದಾರೆ. ಮಗಳೂ ಜೆನಿಶಾ ಲೋಬೊ ಕೂಡ ಕೃಷಿಯಲ್ಲಿ ನೆರವಾಗುತ್ತಿದ್ದಾರೆ.
ಸಿಹಿಯಾದ ಮಿಯಾಜಾಕಿ ಮಾವು
‘ಸಿಹಿಯಾದ ಮಿಯಾಜಾಕಿ ಮಾವಿನ ಹಣ್ಣನ್ನು ಕರಾವಳಿ ಮಣ್ಣಿನಲ್ಲಿ ಬೆಳೆಸುವುದು ಕಷ್ಟ. ಉತ್ತಮ ಹವಾಮಾನದಲ್ಲಿ ಜೋಪಾನ ಮಾಡಿ ಬೆಳೆಸಬೇಕಾದ್ದರಿಂದಲೇ ಈ ಹಣ್ಣು ದುಬಾರಿ. ಮಿಯಾಜಾಕಿ ಹಣ್ಣು ಮಾರುಕಟ್ಟೆಯಲ್ಲಿ ತುಂಬಾ ದುಬಾರಿ. ನಾವು ಬೆಳೆದಿರುವ ಮಾವು ರುಚಿಕರವೂ ಸ್ವಾದಿಷ್ಟವೂ ಆಗಿದೆ ಎನ್ನುತ್ತಾರೆ ಜೋಸೆಫ್ ಲೋಬೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.