ಶಿರ್ವ: ‘ಮಕ್ಕಳಲ್ಲಿ ಮೌಲ್ಯಯುತ ಸಂಸ್ಕಾರ ರೂಪಿಸುವಲ್ಲಿ ತಾಯಂದಿರ ಪಾತ್ರ ಮುಖ್ಯವಾದುದು’ ಎಂದು ವೈದ್ಯೆ ಡಾ.ಕಸ್ತೂರಿ ನಾಯಕ್ ಹೇಳಿದರು.
ಬಂಟಕಲ್ಲು ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆ ಬಳಗದ ವತಿಯಿಂದ ನಡೆದ ‘ಶ್ರಾವಣ ಸಂಭ್ರಮ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಯುರ್ವೇದ ವೈದ್ಯೆ ಡಾ.ಶ್ವೇತಾ ಚಿದಾನಂದ ಕಾಮತ್ ಬೆಂಗಳೂರು, ನಾಟಿ ವೈದ್ಯರಾದ ಹರಿಶ್ಚಂದ್ರ ಪ್ರಭು ಪೆರ್ನಾಲ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ನಾರಾಯಣ ಪ್ರಭು, ಜಯಂತಿ ಪ್ರಭು ದಂಪತಿಯನ್ನು ಗೌರವಿಸಲಾಯಿತು.
ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವೀಣಾ ನಾಯಕ್, ಇನ್ನಂಜೆ ಎಸ್.ವಿ.ಎಚ್.ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಂಜುಳಾ ಎಸ್ ನಾಯಕ್, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ಶುಭ ಹಾರೈಸಿದರು. ಕೊಂಕಣಿ ಜಾನಪದ ಕಲಾವಿದೆ ಕುಸುಮಾ ಕಾಮತ್ ಕರ್ವಾಲು ಕೊಂಕಣಿ ಗೀತೆಗಳನ್ನು ಹಾಡಿದರು.
ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಧನಸಹಾಯ ಮಾಡಲಾಯಿತು. ಭವಾನಿ ನಾಯಕ್ ನಿರೂಪಿಸಿದರು. ಕುಸುಮಾ ಕಾಮತ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.