ADVERTISEMENT

ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:34 IST
Last Updated 23 ನವೆಂಬರ್ 2025, 5:34 IST

ಕೋಟ (ಬ್ರಹ್ಮಾವರ): ಇಲ್ಲಿನ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಮಣೂರು ಗೀತಾನಂದ ಫೌಂಡೇಷನ್‌, ಟದ ಉಸಿರು ಸಂಸ್ಥೆ, ಬಾಳ್ಕುದ್ರು ಕೈಂಡ್ ಹಾರ್ಟ್ಸ್, ಬಾರ್ಕೂರು ಮೂಡುಕೇರಿ ವೇಣುಗೋಪಾಲ ಎಜುಕೇಷನಲ್ ಸೊಸೈಟಿ, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಕೊಡಮಾಡುವ 5ನೇ ವರ್ಷದ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಇದೇ 30ರಂದು ಮಧ್ಯಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಸತೀಶ ಕುಂದರ್, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೈಂಡ್ ಹಾರ್ಟ್ಸ್‌ನ ಹೆನ್ರಿ ಲೂಯಿಸ್, ವೇಣುಗೋಪಾಲಕೃಷ್ಣ ಎಜುಕೇಷನಲ್ ಸೊಸೈಟಿಯ ಗಣೇಶ, ಕೋಟತಟ್ಟು ಪಿಡಿಒ ರವೀಂದ್ರ ರಾವ್, ಪಂಚಾಯಿತಿ ಕಾರ್ಯದರ್ಶಿ ಸುಮತಿ ಅಂಚನ್ ತಿಳಿಸಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ: ಮಂದಾರ್ತಿ ದುರ್ಗಾಪರಮೇಶ್ವರಿ ಅನುದಾನಿತ ಹಿ. ಪ್ರಾ. ಶಾಲೆಯ ಋತಿಕಾ, ಮಣಿಪಾಲ ಮಾಧವ ಕೃಪಾ ಶಾಲೆಯ ಪ್ರಿಯದರ್ಶಿನಿ ಎಸ್‌.ಡಿ, ತೆಕ್ಕಟ್ಟೆ ಸೇವಾ ಸಂಗಮದ ಕೆ. ಗೀತಾ ಹೆಗ್ಡೆ, ಬೈಂದೂರಿನ ಸೇಂಟ್‌ ಥೋಮಸ್‌ ಶಾಲೆಯ ಶ್ರವಣ್ ರಾವ್, ಮಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಮ್ಯಾ, ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಕ್ಷಾ, ಕುಂದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತೇಜಸ್ ಕೋಣಿ, ಓಕ್‌ವುಡ್‌ ಇಂಡಿಯನ್‌ ಸ್ಕೂಲ್‌ನ ಅಮೈರ ಶೋಲಾಪುರ, ಕಿರಿಂಜೇಶ್ವರ ಸಂದೀಪನ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ದೀಪ್ತಾ ಡಿ. ಕುಂದರ್, ಬ್ರಹ್ಮಾವರ ಎಸ್‌ಎಂಎಸ್‌ನ ಆರಾಧ್ಯ ಭಟ್, ಆದಿಉಡುಪಿಯ ಶ್ರೀಯಾ ಎಸ್. ಪೂಜಾರಿ, ಕುಂದಾಪುರ ಎಚ್‌ಎಂಎಂ ಇಂಗ್ಲಿಷ್ ಮಾಧ್ಯಮ ಶಾಲೆಯ ಅರ್ನೋನ್ ಡಿ. ಅಲ್ಮೆಡ, ಯಡ್ತಾಡಿ ಸ.ಹಿ.ಪ್ರಾ. ಶಾಲೆಯ ಕ್ಷೇಮ್ಯ, ಉಡುಪಿ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ ದೇಷ್ಣಾ ಎಸ್. ಕಾಂಚನ್, ಶಂಕರನಾರಾಯಣ ಮದರ್‌ ತೆರೆಸಾ ಮೆಮೊರಿಯಲ್‌ ಶಾಲೆಯ ಸ್ಮಿತಾ ಬಿ.ಕೆ, ಕೋಟ ಸ.ಹಿ.ಪ್ರಾ. ಶಾಲೆಯ ವೇದಿತಾ, ಉಡುಪಿ ವಿದ್ಯೋದಯ ಪಬ್ಲಿಕ್‌ ಶಾಲೆಯ ಸ್ಮಿತ್ ಕೆ. ಕುಂದರ್, ಸಾನ್ವಿ ಸಾಲಿಯಾನ್‌ ಆಯ್ಕೆಯಾಗಿದ್ದಾರೆ. ಸಾಹೇಬರಕಟ್ಟೆ ಮೈಂಡ್‌ ಲೀಡ್‌ ಕಿಂಡರ್‌ ಗಾರ್ಡನ್‌ನ ಶ್ರೀಯಾ ಕೆ. ಕಾಂಚನ್ ಕಾರಂತ ವಿಶೇಷ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ADVERTISEMENT

ಪ್ರೌಢಶಾಲಾ ವಿಭಾಗ: ಹರ್ಷಿತಾ ಅಮೀನ್– ಮಣೂರು ಸರ್ಕಾರಿ ಸಂಯುಕ್ತ ಪ್ರೌಶಾಲೆ, ಸಾನ್ವಿ ಎಸ್. ಅಂಚನ್– ಬ್ರಹ್ಮಾವರ ಲಿಟ್ಲ್‌ ರಾಕ್‌ ಇಂಡಿಯನ್‌ ಸ್ಕೂಲ್‌, ಗಣೇಶ ಪ್ರಸಾದ ಶೆಟ್ಟಿ– ಹೊಸಂಗಡಿ ಸರ್ಕಾರಿ ಪ್ರೌಢಶಾಲೆ, ಅನ್ವಿ ಎಚ್. ಅಂಚನ್– ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ನಿರೀಕ್ಷಾ– ಹಾರಾಡಿ ಜಿ.ಎಂ. ಸ್ಕೂಲ್‌, ಧನ್ವಿ ಜೆ. ಅಮೀನ್– ಕೋಡಿ ಕನ್ಯಾಣ ಸರ್ಕಾರಿ ಪ್ರೌಢಶಾಲೆ, ಸಾಕ್ಷರ್ ಆರ್. ಶೆಟ್ಟಿ– ಹಳ್ನಾಡು ತುಳಸಿ ವಿದ್ಯಾಮಂದಿರ, ಖುಷಿ ಆರ್. ಮೊಗವೀರ– ಹೇರಾಡಿ ವಿದ್ಯೇಶ ವಿದ್ಯಾಮಾನ್ಯ ಶಾಲೆ, ಅಶ್ವಿಜ್ ಅತ್ರೇಯ ಜಿ– ಸುಳ್ಯ ಸೇಂಟ್‌ ಜೋಸೆಫ್‌ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ನಿಶಾಂತ್ ಸಿ. ದೇವಾಡಿಗ– ತೆಕ್ಕಟ್ಟೆ ಸರ್ಕಾರಿ ಪಿಯು ಕಾಲೇಜು, ಕೃತಿಕಾ ಕೆ. ಗಾಣಿಗ– ಬೈಂದೂರು ಸರ್ಕಾರಿ ಪಿಯು ಕಾಲೇಜು, ಪ್ರತೀತಿ ಪಿ.ಎಸ್– ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಪನ್ನಗ ಕೆ. ಆರೂರು– ಶಂಕರನಾರಾಯಣ ಮದರ್‌ ತೆರೆಸಾ ಶಾಲೆ, ಕೃಷ್ಣಪ್ರಸಾದ ಭಟ್– ಹೆಬ್ರಿ ಅಮೃತಭಾರತಿ, ತ್ರಿಶಾ– ಬೈಂದೂರು ರತ್ತು ಬಾಯಿ ಜನತಾ ಪ್ರೌಢಶಾಲೆ, ಮಹಾಲಕ್ಷ್ಮಿ – ಕೋಟೇಶ್ವರ ಕಾಲೇಜು, ರೆಹನಾ ಕೈಸರ್– ಬೆಂದೂರ್‌ವೆಲ್‌ ಸೇಂಟ್‌ ಆಗ್ನೆಸ್‌ ಶಾಲೆ, ಪ್ರಾಪ್ತಿ ಆರ್. ಶೆಟ್ಟಿ– ಮೂಡುಬಿದಿರೆ ಆಳ್ವಾಸ್‌ ಸೆಂಟ್ರಲ್‌ ಸ್ಕೂಲ್‌, ಯತ್ವಿಕ್ ಯು. ಮೊಯಿಲಿ– ಪುತ್ತಿಗೆ ಆಳ್ವಾಸ್‌ ಕೇಂದ್ರೀಯ ಶಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.