ADVERTISEMENT

ರೋಟರಿ ಸಹಾಯಕ ಗವರ್ನರ್ ಆಗಿ ಶ್ಯಾಮಸುಂದರ ನಾಯರಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:43 IST
Last Updated 26 ಜೂನ್ 2025, 13:43 IST
ಶ್ಯಾಮಸುಂದರ ನಾಯರಿ
ಶ್ಯಾಮಸುಂದರ ನಾಯರಿ   

ಕೋಟ(ಬ್ರಹ್ಮಾವರ): ರೋಟರಿ ವಲಯ 2ರ ಸಹಾಯಕ ಗವರ್ನರ್ ಆಗಿ ಕೋಟದ ಶ್ಯಾಮಸುಂದರ ನಾಯರಿ ಆಯ್ಕೆಯಾಗಿದ್ದಾರೆ.

ಇವರು, ವಲಯ 2ರ ವ್ಯಾಪ್ತಿಯಲ್ಲಿ 6 ಕ್ಲಬ್‌ಗಳಿಗೆ ಸಹಾಯಕ ಗವರ್ನರ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ. 2005ರಲ್ಲಿ ರೋಟರಿಗೆ ಪಾದಾರ್ಪಣೆ ಮಾಡಿದ ಶ್ಯಾಮಸುಂದರ, 2010-11ರಲ್ಲಿ ರೋಟರಿ ಕ್ಲಬ್‌ ಕೋಟ ಸಾಲಿಗ್ರಾಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ರೋಟರಿ ಜಿಲ್ಲೆಯಲ್ಲಿ ಬೆಸ್ಟ್ ಕ್ಲಬ್ ಅವಾರ್ಡ್ ಪಡೆದಿದ್ದಾರೆ. 2018ರಲ್ಲಿ ವಲಯ ಲೆಪ್ಟ್‌ನಂಟ್ ಆಗಿ, ಬಳಿಕ ರೋಟರಿಯಲ್ಲಿ ವಲಯ ಮತ್ತು ಜಿಲ್ಲಾ ಮಟ್ಟದ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT