
ಹೆಬ್ರಿ: ಸರ್ಕಾರಿ ಪ್ರಥಮದರ್ಜೆ ಕಾಲೇಜಿನ್ಲಿ ಐಕ್ಯುಎಸಿ ಆರ್ಥಿಕ ಸಹಾಯದಿಂದ, ಪ್ಲೇಸ್‌ಮೆಂಟ್ ಸೆಲ್, ಮ್ಯಾಜಿಕ್ ಬಸ್ ಫೌಂಡೇಷನ್ ಸಹಯೋಗದಲ್ಲಿ ಅಂತಿಮ ವರ್ಷದ ಬಿ.ಕಾಂ, ಬಿ.ಎ, ಎಂ.ಕಾಂ. ವಿದ್ಯಾರ್ಥಿಗಳಿಗೆ 3 ದಿನಗಳ ಸಾಫ್ಟ್ ಸ್ಕಿಲ್ ತರಬೇತಿಗೆ ಸೋಮವಾರ ಚಾಲನೆ ನೀಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ ಎಸ್. ಅವರು, ವಿದ್ಯಾರ್ಥಿಗಳನ್ನು ಕಾರ್ಪೊರೇಟ್ ಲೋಕದ ಅಗತ್ಯಗಳಿಗೆ ಹೊಂದುವಂತೆ ಅವಶ್ಯಕ ಕೌಶಲಗಳಿಂದ ಸಜ್ಜುಗೊಳಿಸುವುದು ಇದರ ಉದ್ದೇಶ. ಸ್ಪೋಕನ್ ಇಂಗ್ಲಿಷ್, ನಾಯಕತ್ವ ಅಭಿವೃದ್ಧಿ, ಸಂವಹನ ಕೌಶಲ, ಸಂದರ್ಶನ ಎದುರಿಸುವ ತಂತ್ರಗಳ ಮಾಹಿತಿ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ಹೇಳಿದರು.
ಜೆಸಿಐ ಅಧ್ಯಕ್ಷ ಸತೀಶ್ ಕುಲಾಲ್, ತರಬೇತಿಯ ಸಂಪನ್ಮೂಲ ವ್ಯಕ್ತಿ ಶೋಧನಾ, ಭಾವನಾ, ಕುನಲ್, ರಮೇಶ್ ಎಸ್.ಆರ್, ಉಪನ್ಯಾಸಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.