ADVERTISEMENT

ಲೋಕಸಭಾ ಚುನಾವಣೆ: ಯಶವಂತಪುರ–ಕಾರವಾರ ಮಧ್ಯೆ ವಿಶೇಷ ತತ್ಕಾಲ್ ರೈಲು

ಮತದಾನ ಮಾಡಲು ಬರುವವರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 9:47 IST
Last Updated 17 ಏಪ್ರಿಲ್ 2019, 9:47 IST
   

ಉಡುಪಿ: ಲೋಕಸಭಾ ಚುನಾವಣೆಗೆ ಮತದಾರರಿಗೆ ಅನುಕೂಲವಾಗುವಂತೆ ಯಶವಂತಪುರ–ಕಾರವಾರ ಮಧ್ಯೆ ತತ್ಕಾಲ್‌ ವಿಶೇಷ ರೈಲು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ಏಪ್ರಿಲ್ 17ರಂದು ರಾತ್ರಿ 10ಗಂಟೆಗೆ ಯಶವಂತಪುರ ಜಂಕ್ಷನ್‌ನಿಂದ ಹೊರಡಲಿರುವ 06557 ರೈಲು ಮರುದಿನ ಮಧ್ಯಾಹ್ನ 3.30ಕ್ಕೆ ಕಾರವಾರ ತಲುಪಲಿದೆ.

ಏ.18ರಂದು ಸಂಜೆ 6ಕ್ಕೆ ಕಾರವಾರದಿಂದ ಹೊರಡಲಿರುವ 06558 ರೈಲು ಮರುದಿನ ಬೆಳಿಗ್ಗೆ 10.35ಕ್ಕೆ ಯಶವಂತಪುರ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ವಿಶೇಷ ತತ್ಕಾಲ್ ರೈಲು, ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಬಿ.ಜಿ. ನಗರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಯಡಮಂಗಲ, ಕಬಕ ಪುತ್ತೂರು, ಮಂಗಳೂರು ಜಂಕ್ಷನ್‌, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್‌ ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ ಸ್ಟೇಷನ್‌ನಲ್ಲಿ ನಿಲುಗಡೆಯಾಗಲಿದೆ.

ಒಟ್ಟು 18 ಕೋಚ್‌ಗಳನ್ನು ಹೊಂದಿದ್ದು, 3 ಟೈರ್ ಎಸಿ 4 ಬೋಗಿಗಳು, 12 ಸ್ಲೀಪರ್ ಕೋಚ್‌, 2 ಎಸ್‌ಎಲ್‌ಆರ್‌ ಕೋಚ್‌ಗಳನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.