ADVERTISEMENT

ಕ್ರೀಡೆಯಿಂದ ಉದ್ಯೋಗ ಅವಕಾಶ: ಮಾರುತಿ

ಬ್ರಹ್ಮಾವರ: ಜಿಲ್ಲಾ ಮಟ್ಟದ ತ್ರೋಬಾಲ್‌ ಪಂದ್ಯಾಟಕ್ಕೆ ಚಾಲನೆ ನೀಡಿದ ಡಿಡಿಪಿಯು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:22 IST
Last Updated 25 ಡಿಸೆಂಬರ್ 2025, 6:22 IST
ಬ್ರಹ್ಮಾವರ ಎಸ್‌ಎಂಎಸ್‌ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್‌ ಟೂರ್ನಿಯನ್ನು ಸಂಚಾಲಕ ಫಾ.ಎಂ.ಸಿ. ಮಥಾಯಿ ಉದ್ಘಾಟಿಸಿದರು
ಬ್ರಹ್ಮಾವರ ಎಸ್‌ಎಂಎಸ್‌ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್‌ ಟೂರ್ನಿಯನ್ನು ಸಂಚಾಲಕ ಫಾ.ಎಂ.ಸಿ. ಮಥಾಯಿ ಉದ್ಘಾಟಿಸಿದರು   

ಬ್ರಹ್ಮಾವರ: ‘ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಮನಸ್ಸಿಗೆ ನೆಮ್ಮದಿ, ಉತ್ತಮ ಆರೋಗ್ಯ ಲಭಿಸುತ್ತದೆ. ಭವಿಷ್ಯದಲ್ಲಿ ಉತ್ತಮ ಉದ್ಯೋಗಾ ಅವಕಾಶಗಳಿಗೆ ಅದು ದಾರಿ ಮಾಡಿಕೊಡುತ್ತದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಹೇಳಿದರು.

ಇಲ್ಲಿನ ಎಸ್‌ಎಂಎಸ್‌ ಪದವಿಪೂವ೯ ಕಾಲೇಜು, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂವ೯) ಜಂಟಿ ಆಶ್ರಯದಲ್ಲಿ ಎಸ್‌ಎಂಎಸ್‌ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಥ್ರೋಬಾಲ್‌ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಸಂಸ್ಥೆಯ ಸಂಚಾಲಕ ಫಾ.ಎಂ.ಸಿ. ಮಥಾಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯದರ್ಶಿ ಅಲನ್‌ ರೋಹನ್‌ ವಾಜ್‌, ರೋಟರಿ ಕ್ಲಬ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಉದ್ಯಮಿ ಕರುಣಾಕರ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ  ಜೀವನ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶ್‌ ಕುಮಾರ್, ತಾಲ್ಲೂಕು ಕ್ರೀಡಾ ಸಂಯೋಜಕ ದಿನೇಶ್‌ ಕುಮಾರ್‌ ಶೆಟ್ಟಿ ಮಂದಾರ್ತಿ ಇದ್ದರು.

ADVERTISEMENT

ಪ್ರಾಂಶುಪಾಲ ಐವನ್‌ ದೊನಾತ್‌ ಸುವಾರಿಸ್‌ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಘು ಕಾಡೂರು ವಂದಿಸಿದರು. ಸಂತೋಷ ನೀಲಾವರ ನಿರೂಪಿಸಿದರು. ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಕಾಲೇಜು ವಿಭಾಗದ ಕೋಶಾಧಿಕಾರಿ ಥೋಮಸ್‌ ಸುವಾರಿಸ್‌,  ಉಪನ್ಯಾಸಕ ರಾಘವೇಂದ್ರ ಐತಾಳ್, ಉಮಾ ಇದ್ದರು. 

ಫಲಿತಾಂಶ: ಬಾಲಕಿಯರ ವಿಭಾಗದಲ್ಲಿ ಬ್ರಹ್ಮಾವರ ತಾಲ್ಲೂಕು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಕಾಪು ತಾಲ್ಲೂಕು ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ವಿಭಾಗದಲ್ಲಿ ಕಾಪು ತಾಲ್ಲೂಕು ಪ್ರಥಮ ಸ್ಥಾನವನ್ನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಬ್ರಹ್ಮಾವರ ತಾಲ್ಲೂಕು ದ್ವಿತೀಯ ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.