ADVERTISEMENT

ಬೌದ್ಧಿಕ ವಿಕಾಸಕ್ಕೆ ಕ್ರೀಡೆ ಸಹಕಾರಿ: ಪ್ರಾಂಶುಪಾಲೆ ಪೂರ್ಣಿಮಾ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:13 IST
Last Updated 22 ಆಗಸ್ಟ್ 2025, 5:13 IST
ಚೇರ್ಕಾಡಿ ಮುಂಡ್ಕಿನಜೆಡ್ಡು ಜ್ಞಾನಶಕ್ತಿ ಕ್ರೀಡಾ ಮತ್ತು ಕಲಾ ಸಂಘದ ವತಿಯಿಂದ ಆಟೋಟ ಸ್ಪರ್ಧಾ ಕಾರ್ಯಕ್ರಮ ನಡೆಯಿತು
ಚೇರ್ಕಾಡಿ ಮುಂಡ್ಕಿನಜೆಡ್ಡು ಜ್ಞಾನಶಕ್ತಿ ಕ್ರೀಡಾ ಮತ್ತು ಕಲಾ ಸಂಘದ ವತಿಯಿಂದ ಆಟೋಟ ಸ್ಪರ್ಧಾ ಕಾರ್ಯಕ್ರಮ ನಡೆಯಿತು   

ಬ್ರಹ್ಮಾವರ: ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕ್ರೀಡಾ ಚಟುವಟಿಕೆಗಳು ಸಹಕಾರಿ ಎಂದು ಬ್ರಹ್ಮಾವರ ಚೇರ್ಕಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲೆ ಪೂರ್ಣಿಮಾ ಹೇಳಿದರು.

ಚೇರ್ಕಾಡಿ ಮುಂಡ್ಕಿನಜೆಡ್ಡು ಜ್ಞಾನಶಕ್ತಿ ಕ್ರೀಡಾ ಮತ್ತು ಕಲಾ ಸಂಘದ ವತಿಯಿಂದ ನಡೆದ ವಿವಿಧ ಆಟೋಟ ಸ್ಪರ್ಧೆ, ಪ್ರತಿಭಾ ವಿಕಸನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ಮಂಜುನಾಥ ಬಿ ಅಧ್ಯಕ್ಷತೆ ವಹಿಸಿದ್ದರು. ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ನಾಯ್ಕ, ರಾಘವೇಂದ್ರ ಎಂ ಸಾಮಗ, ಶಾರದಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ನಾಯ್ಕ, ಮುಂಡ್ಕಿನಜೆಡ್ಡು ಆರ್‌.ಕೆ.ಪಾಟ್ಕರ್‌ ಶಾಲೆಯ ಅಧ್ಯಕ್ಷ ಸತೀಶ ಪಾಟೀಲ, ರಾಧಾಕೃಷ್ಣ ಸಾಮಂತ, ಅಮೃತ್ ಕುಮಾರ್ ಶೆಟ್ಟಿ, ಸಂಘದ ಸಂಚಾಲಕ ರಾಮಕೃಷ್ಣ ಶೆಟ್ಟಿಗಾರ್, ಸಂಘದ ಗೌರವಾಧ್ಯಕ್ಷ ಭಾಸ್ಕರ ಶೆಟ್ಟಿಗಾರ, ಬಾರ್ಕೂರು ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಸಹ ಮೊಕ್ತೇಸರ ಸುರೇಂದ್ರ ಶೆಟ್ಟಿಗಾರ್‌, ರವಿರಾಜ ಭಟ್‌, ಉದಯ ಕುಮಾರ್‌ಶೆಟ್ಟಿ, ಮುಕ್ತಾ ಆರ್‌ ನಾಯ್ಕ, ನವೀನ ಬಂಗೇರ ಪೇತ್ರಿ, ಸುಧೀರ ಕುಮಾರ್‌ಶೆಟ್ಟಿ, ರವೀಂದ್ರ ನಾಯ್ಕ, ಕಾರ್ತಕ್‌ ಶೆಟ್ಟಿಗಾರ ಇದ್ದರು.

ADVERTISEMENT

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರೇಖಾ ನಾಯ್ಕ ಸ್ವಾಗತಿಸಿದರು. ರಾಜಲಕ್ಷ್ಮಿ ವಂದಿಸಿದರು. ಸಂಘದ ಕಾರ್ಯದರ್ಶಿ ನಾಗೇಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.