ADVERTISEMENT

ಉಡುಪಿ: ಅಂಚೆ ಚೀಟಿ ಪ್ರದರ್ಶನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:40 IST
Last Updated 16 ಆಗಸ್ಟ್ 2024, 15:40 IST
ಅಂಚೆ ಚೀಟಿ ಪ್ರದರ್ಶನವನ್ನು ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಎಲ್.ಕೆ. ದಾಸ್  ಉದ್ಘಾಟಿಸಿದರು
ಅಂಚೆ ಚೀಟಿ ಪ್ರದರ್ಶನವನ್ನು ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಎಲ್.ಕೆ. ದಾಸ್  ಉದ್ಘಾಟಿಸಿದರು   

ಉಡುಪಿ: ಭಾರತೀಯ ಅಂಚೆ ಇಲಾಖೆ ಉಡುಪಿ ಅಂಚೆ ವಿಭಾಗದ ವತಿಯಿಂದ ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿರುವ ‘ಕೃಷ್ಣ ಪೆಕ್ಸ್-2023’ ಅಂಚೆ ಚೀಟಿ ಪ್ರದರ್ಶನವನ್ನು ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಎಲ್.ಕೆ. ದಾಸ್  ಉದ್ಘಾಟಿಸಿದರು.

 ದಿ.ಡಾ.ವಿ.ಎಸ್. ಆಚಾರ್ಯ, ಮತ್ಸ್ಯೋದ್ಯಮಿ ದಿ. ಮಲ್ಪೆ ಮಧ್ವರಾಜ್ ಹಾಗೂ ಕರ್ನಾಟಕ ಗೇರುಬೀಜ ಉತ್ಪಾದಕರ ಸಂಘದ ವಿಶೇಷ ಅಂಚೆ ಲಕೋಟೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್, ‘ದೇಶದ ಪ್ರತಿ ಮನೆಗೂ  ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ಹಾಘೂ ಸರ್ಕಾರದ  ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅಂಚೆ ಇಲಾಖೆ ಕಾರ್ಯ ಮಹತ್ತರ. ಭ್ರಷ್ಟಾಚಾರವಿಲ್ಲದ ಇಲಾಖೆ ಇದು. ಈ ಇಲಾಖೆಯ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹಾಗೂ  ಮೂಲ ಸೌಕರ್ಯವನ್ನು ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಬೇಕು’ ಎಂದರು.

ADVERTISEMENT

ಎಂಜಿಎಂ  ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಟಿ.ಎಸ್. ಅಶ್ವತ್ಥ ನಾರಾಯಣ, ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ. ಕಿರಣ್ ಕುಮಾರ್ ಆಚಾರ್ಯ, ಕರ್ನಾಟಕ ಗೇರುಬೀಜ ಉತ್ಪಾದಕರ ಸಂಘದ ಅಧ್ಯಕ್ಷ ಗೋಪಿನಾಥ್ ಕಾಮತ್ ಇದ್ದರು. ಉಡುಪಿ ಅಂಚೆ ಅಧೀಕ್ಷಕ ರಮೇಶ್ ಪ್ರಭು ಸ್ವಾಗತಿಸಿದರು. ಸಿಬ್ಬಂದಿ ದಯಾನಂದ್ ವಂದಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.