ADVERTISEMENT

ಶಾಶ್ವತ ಕಾಮಗಾರಿಗೆ ಹೆಚ್ಚು ಉತ್ತೇಜನ: ಸುನಿಲ್ ಕುಮಾರ್

₹2.05 ಕೋಟಿ ಅನುದಾನದಲ್ಲಿ ಕುಚ್ಚೂರು– ಹಾಲಿಕೊಡ್ಲು– ಮಾತ್ಕಲ್ಲು ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:40 IST
Last Updated 16 ಅಕ್ಟೋಬರ್ 2025, 4:40 IST
ಹೆಬ್ರಿಯ ಕುಚ್ಚೂರು ಗ್ರಾಮದ ಮಾತ್ಕಲ್ಲು– ಸಳ್ಳೆಕಟ್ಟೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು
ಹೆಬ್ರಿಯ ಕುಚ್ಚೂರು ಗ್ರಾಮದ ಮಾತ್ಕಲ್ಲು– ಸಳ್ಳೆಕಟ್ಟೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು   

ಹೆಬ್ರಿ: ‘ಕುಚ್ಚೂರು ಗ್ರಾಮದ ಮಾತ್ಕಲ್ಲು, ಸಳ್ಳೆಕಟ್ಟೆ ಸಂಪರ್ಕಿಸುವ ರಸ್ತೆಗೆ ಬಹಳ ಕಾಲದಿಂದ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇದ್ದು ಇದೀಗ ಸಾಕಾರಗೊಂಡಿದೆ. ದೊಡ್ಡ ಮೊತ್ತದ ಅನುದಾನ ಬೇಕಾಗಿತ್ತು, ತಡವಾದರೂ ಉತ್ತಮ ರಸ್ತೆ ನಿರ್ಮಾಣಕ್ಕೆ ಅನುದಾನ ದೊರೆತಿದೆ. ನಾವು ಶಾಶ್ವತ ಕಾಮಗಾರಿ ಮಾಡಲು ಸದಾ ನಿಗಾವಹಿಸಿ ಕೆಲಸ ಮಾಡಿರುವುದರಿಂದ ಜನಮಾನಸದಲ್ಲಿ ಉಳಿದಿದೆ’ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.

ಅವರು ಸೋಮವಾರ ಕೇಂದ್ರ ಸರ್ಕಾರದ ಯೋಜನೆಯಡಿ ₹2.05 ಕೋಟಿ ವೆಚ್ಚದಲ್ಲಿ ಕುಚ್ಚೂರು ಗ್ರಾಮದ ಹಾಲಿಕೊಡ್ಲು, ಮಾತ್ಕಲ್ಲು, ಸಳ್ಳೆಕಟ್ಟೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ರಸ್ತೆ ಗುಣಮಟ್ಟಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು. 5 ವರ್ಷಗಳ ಕಾಲ ಗುತ್ತಿಗೆದಾರರು ನಿರ್ವಹಣೆ ಮಾಡಿ ಕೊನೆಯ ಅವಧಿಯಲ್ಲಿ ಮತ್ತೊಮ್ಮೆ ಡಾಂಬಾರು ಹಾಕುವ ಕಾರ್ಯ ಮಾಡುತ್ತಾರೆ. ಆದರಿಂದ ರಸ್ತೆ ದೀರ್ಘಕಾಲ ಬಾಳುತ್ತದೆ. ಬೇಡಿಕೆಯಂತೆ ಆದ್ಯತೆಯಲ್ಲಿ ಸಾರ್ವಜನಿಕರ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರು.

ADVERTISEMENT

ಕೃಷಿಕ ರಾಜೀವ ಶೆಟ್ಟಿ ಮಾತನಾಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ವಿಶೇಷ ಪ್ರಯತ್ನದಿಂದ, ಶಾಸಕ ಸುನಿಲ್ ಕುಮಾರ್ ಮುತುವರ್ಜಿಯಿಂದ ಈ ರಸ್ತೆ ನಿರ್ಮಾಣವಾಗಿದೆ. ಬಹುಕಾಲದ ಬೇಡಿಕೆ ಸಾಕಾರಗೊಂಡಿದೆ ಎಂದರು. ರಸ್ತೆಯ ಮಂಜೂರಾತಿಯ ಹಿಂದೆ ದುಡಿದವರಿಗೆ ಅಭಿನಂದನೆ ಸಲ್ಲಿಸಿದರು.

ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಸದಸ್ಯರಾದ ಸತೀಶ ಪೂಜಾರಿ ಬೈಲುಮನೆ, ಮಾಲಿನಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಶಂಕರ್, ಎಂಜಿನಿಯರ್ ಶರತ್, ಪಿಡಿಒ ರಿತೇಶ್, ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ಅಮೃತ್ ಕುಮಾರ್ ಶೆಟ್ಟಿ, ಲಕ್ಷ್ಮೀನಾರಾಯಣ ನಾಯಕ್ ಕನ್ಯಾನ, ಸುಧಾಕರ ಹೆಗ್ಡೆ, ಸ್ಥಳೀಯ ಮುಖಂಡರಾದ ಪ್ರಭಾಕರ ಪೂಜಾರಿ, ಶ್ರೀಕಾಂತ್ ಪೂಜಾರಿ, ದೇವಳಬೈಲು ಸುಧಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಮಣ್ಣ ಪೂಜಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.