ಕಾರ್ಕಳ: ಈಚೆಗೆ ಶರಣಾದ ನಾಲ್ವರು ನಕ್ಸಲರನ್ನು ಮಂಗಳವಾರ ಕಾರ್ಕಳದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾರಪ್ಪ (ಜಯಣ್ಣ), ಲತಾ (ಮುಂಡಗಾರು ಲತಾ), ವನಜಾಕ್ಷಿ (ಜ್ಯೋತಿ) ಹಾಗೂ ಸುಂದರಿ (ಗೀತಾ, ಜೆನ್ನಿ) ಅವರನ್ನು ಬಿಗಿ ಭದ್ರತೆಯಲ್ಲಿ ಸೋಮವಾರ ಕರೆದುತಂದು, ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಹೆಬ್ರಿ ತಾಲ್ಲೂಕಿನ ಸೀತಾನದಿ ಭಾಸ್ಕರ ಶೆಟ್ಟಿ ಹಾಗೂ ಕಬ್ಬಿನಾಲೆ ಸದಾಶಿವ ಗೌಡ ಅವರ ಕೊಲೆ ಪ್ರಕರಣಗಳು ಇವರ ಮೇಲಿವೆ ಎನ್ನಲಾಗಿದೆ.
ಕಾರ್ಕಳ ಗ್ರಾಮಾಂತರ, ಹೆಬ್ರಿ, ಅಜೆಕಾರು ಠಾಣಾ ವ್ಯಾಪ್ತಿಗಳಲ್ಲಿ ಇವರ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಶರಣಾಗತ ನಕ್ಸಲರನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸುವ ಜವಾಬ್ದಾರಿಯನ್ನು ಎಎಸ್‌ಪಿ ಹರ್ಷ ಪ್ರಿಯಂವದ ವಹಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.