
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ಸಂಬಂಧಿಕರೇ ಮನೆಗೆ ನುಗ್ಗಿ ಕಳವು ಮಾಡಿರುವ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಜಮಾಡಿ ಕೋಡಿ ನಿವಾಸಿ ರಜನಿ ಅವರು ಉದ್ಯೋಗದ ನಿಮಿತ್ತ ಮುಂಬೈನಲ್ಲಿ ವಾಸವಾಗಿದ್ದರು. ಜನವರಿ 21ರಂದು ಸಂಬಂದಿಕರಾದ ರೇಖಾ ಕಾಂಚನ್, ಹೇಮಲತಾ ಕೋಟ್ಯಾನ್, ದೇವದಾಸ್ ಕಾಂಚನ್, ರೋಹಿತ್ ಕೋಟ್ಯಾನ್, ಧನರಾಜ್ ಕಾಂಚನ್ ಹಾಗೂ ಶ್ರೀಶಾ ಕೋಟ್ಯಾನ್ ಎಂಬವರು ಮನೆಯ ಬಳಿ ಬಂದು ಮನೆಯ ಪ್ರಧಾನ ಬಾಗಿಲನ್ನು ಒಡೆದು ಮನೆಯ ಒಳಗಡೆ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮನೆಯಲ್ಲಿದ್ದ ಅಂದಾಜು ₹1,27,000 ಮೌಲ್ಯದ ಚಿನ್ನಾಭರಣ, ₹12 ಸಾವಿರ ನಗದು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.