ಉಡುಪಿ: ಮುಂಬೈನಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಭಾನುವಾರ ಹೊರಡಬೇಕಿದ್ದ 01151 ಮುಂಬೈ ಸಿಎಸ್‌ಎಂಟಿ–ಮಡಗಾವ್ ರೈಲಿನ ಸಂಚಾರವನ್ನು ರದ್ದುಗೊಳಿಸಲಾಯಿತು. ಜುಲೈ 19ರಂದು 01152 ಮಡಗಾವ್–ಮುಂಬೈ ಸಿಎಸ್‌ಎಂಟಿ ರೈಲು ಸಂಚಾರ ಕೂಡ ರದ್ದಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪಡಿಲ್ ಹಾಗೂ ಕುಲಶೇಖರ ಮಾರ್ಗಮಧ್ಯೆ ಭೂಕುಸಿತದಿಂದಾಗಿ ಹಲವು ರೈಲುಗಳ ಸಂಚಾರ ನಿಲ್ಲಿಸಲಾಗಿದೆ. ಜುಲೈ 19ರಂದು ಸಂಚರಿಸಬೇಕಿದ್ದ 06163 ಸಂಖ್ಯೆಯ ಲೋಕಮಾನ್ಯ ತಿಲಕ್–ಕೊಚುವೆಲಿ ರೈಲು ರದ್ದಾಗಿದೆ. 06345 ಸಂಖ್ಯೆಯ ಲೋಕಮಾನ್ಯ ತಿಲಕ್–ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಪ್ರತಿದಿನ ಸಂಚರಿಸುವ ರೈಲು ಜುಲೈ 20ರಂದು ಸಂಚರಿಸುವುದಿಲ್ಲ. ಪ್ರಯಾಣಿಕರು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.