ಉಡುಪಿ: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಜಿಲ್ಲೆಯಿಂದ ಯಾರೂ ಹೋಗಿಲ್ಲ. ಆದರೆ, ಇತರೆ ಕಾರ್ಯಗಳ ನಿಮಿತ್ತ ಜಿಲ್ಲೆಯ 16 ಜನ ದೆಹಲಿಗೆ ತೆರಳಿದ್ದರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
16 ಜನರನ್ನೂ ಗುರುತಿಸಲಾಗಿದ್ದು, 9 ಮಂದಿಯನ್ನು ಹೋಂ ಕ್ವಾರಟೈಂನ್ ಮಾಡಲಾಗಿದೆ. ಉಳಿದವರು ಬೇರೆ ಜಿಲ್ಲೆಗಳಲ್ಲಿದ್ದು, ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.