ADVERTISEMENT

ಕ್ರೀಡಾಕೂಟ: ಕೋಟೇಶ್ವರ ರೋಟರಿ ಕ್ಲಬ್‌ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:23 IST
Last Updated 6 ಡಿಸೆಂಬರ್ 2022, 5:23 IST
ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಸಾರಥ್ಯದಲ್ಲಿ ನಡೆದ ರೋಟರಿ ಜಿಲ್ಲೆ 3182 ವಲಯ 2ರ ಕ್ರೀಡಾಕೂಟದಲ್ಲಿ ಕೋಟೇಶ್ವರ ರೋಟರಿ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಸಾರಥ್ಯದಲ್ಲಿ ನಡೆದ ರೋಟರಿ ಜಿಲ್ಲೆ 3182 ವಲಯ 2ರ ಕ್ರೀಡಾಕೂಟದಲ್ಲಿ ಕೋಟೇಶ್ವರ ರೋಟರಿ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು.   

ಬ್ರಹ್ಮಾವರ: ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಸಾರಥ್ಯದಲ್ಲಿ ನಡೆದ ರೋಟರಿ ಜಿಲ್ಲೆ 3182 ವಲಯ 2ರ ಕ್ರೀಡಾಕೂಟದಲ್ಲಿ 28 ಪ್ರಥಮ, 16 ದ್ವಿತೀಯ ಹಾಗು 6 ತೃತೀಯ ಸ್ಥಾನಗಳನ್ನು ಗಳಿಸುವ ಮೂಲಕ ಕೋಟೇಶ್ವರ ರೋಟರಿ ಕ್ಲಬ್‌ ಚಾಂಪಿಯನ್ ಆಗಿ ಹೊರಹೊಮ್ಮಿತು.

ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಜ್ಞಾನವಸಂತ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ಮಾಜಿ ಸಹಾಯಕ ಗವರ್ನರ್‌ಗಳಾದ ಗಣೇಶ ಶೆಟ್ಟಿ, ಗಜೇಂದ್ರ ಶೆಟ್ಟಿ, ಅಧ್ಯಕ್ಷ ಸುಧೀರ ಶೆಟ್ಟಿ ನೂಜಿ, ಕಾರ್ಯದರ್ಶಿ ವಿಜಯಕುಮಾರ ಶೆಟ್ಟಿ, ಆ್ಯನ್ಸ್ ಅಧ್ಯಕ್ಷೆ ಸೀಮಾ ಎಸ್. ಶೆಟ್ಟಿ, ಕಾರ್ಯದರ್ಶಿ ರೇವತಿ ಪ್ರಭಾಕರ್ , ರೋಟರಿ ವಲಯ 2ರ ಅಸಿಸ್ಟೆಂಟ್ ಗವರ್ನರ್ ಪ್ರಭಾಕರ ಕುಂಭಾಶಿ, ಕೋಟ-ಸಾಲಿಗ್ರಾಮದ ಅಧ್ಯಕ್ಷ ಅರುಣ ಕುಂದರ್, ವಲಯ ಕ್ರೀಡಾ ಸಂಯೋಜಕ ಶ್ಯಾಮ ಸುಂದರ ನಾಯರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT