
ಉಡುಪಿ: ನಗರದ ಅಂಬಲಪಾಡಿ ದೇವಸ್ಥಾನದ ಬಳಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಶೋಭಾಯಾತ್ರೆಗೆ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಚಾಲನೆ ನೀಡಿದರು.
ಶೋಭಾಯಾತ್ರೆಯು ಅಂಬಲಪಾಡಿ ಮಹಾಕಾಳಿ ಮಾರ್ಗ, ಬೀಡು ಮಾರ್ಗ, ಆನಂದ ರಾವ್ ಮಾರ್ಗವಾಗಿ ಸಾಗಿ ಅಂಬಲಪಾಡಿ ಬಸ್ ನಿಲ್ದಾಣದ ಬಳಿ ಸಮಾಪನಗೊಂಡಿತು.
ಅಂಬಲಪಾಡಿಯ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಹಿಂದೂ ಸಂಗಮದ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಸಮಾಜ ಸೇವಕ ವಿಶುಕುಮಾರ್ ಶೆಟ್ಟಿ ಅಂಬಲಪಾಡಿ ವಹಿಸಿದ್ದರು.
ರಾಷ್ಟೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಸಹ ಕಾರ್ಯವಾಹ ಪ್ರಶಾಂತ್ ಅರೆಶೀರೂರು ಅವರು ಬೌದ್ಧಿಕ್ ನಡೆಸಿಕೊಟ್ಟರು. ಶೇಖರ ಶೆಟ್ಟಿಗಾರ್ ಅಂಬಲಪಾಡಿ ಉಪಸ್ಥಿತರಿದ್ದರು.
ಜಯ ಭಂಡಾರಿ ಸ್ವಾಗತಿಸಿದರು. ರಮೇಶ್ ಸಾಲ್ಯಾನ್ ಅಂಬಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕಾರ ಭಾರತಿ ಉಡುಪಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ಗಣೇಶ್ ಶೆಣೈ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಆಚಾರ್ಯ ಅಂಬಲಪಾಡಿ ವಂದಿಸಿದರು.
ವಿಜಯ ಭಟ್ ಕಡೆಕಾರು ವಂದೇ ಮಾತರಂ ಹಾಡಿದರು. ಶಂಕರ ಅಂಬಲಪಾಡಿ ಮತ್ತು ಪದ್ಮನಾಭ ಅಂಬಲಪಾಡಿ ಅವರು ವೈಯಕ್ತಿಕ ಗೀತೆ ಹಾಡಿದರು. ಉಮೇಶ್ ಶೆಟ್ಟಿಗಾರ್, ಸುಧಾಕರ್ ಶೆಟ್ಟಿ ಅಂಬಲಪಾಡಿ ಅತಿಥಿಗಳನ್ನು ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.